ಫಲಹಾರ(ಒಂದು ಹರಟೆ)
ಅನ್ನೋವಾಗಲೇ ನಿಮ್ಮ ಮನಸ್ಸಿನ ತೆರೆಯ ಮೇಲೆ `ಏಕಾದಶಿ', ಶಿವರಾತ್ರಿ, ಅಷ್ಟಮಿ, ಚತುಥರ್ಿ, ಮುಂತಾದ ಪುಣ್ಯ ತಿಥಿಗಳಂದು ದೈವಭಕ್ತರು ಕೈಗೊಳ್ಳುವ `ಉಪವಾಸ' ವ್ರತಗಳ ನೆನಪುಗಳ ಚಿತ್ರಣ ಮೂಡಿದ್ದೇ ಆದರೆ ಆಶ್ಚರ್ಯವೇನು ? ಯಾಕೆಂದರೆ, ಉಪವಾಸ ಹಾಗೂ ಫಲಾಹಾರ ಇವೆರಡನ್ನೂ ಪಯರ್ಾಯ ಪದಗಳನ್ನಾಗಿ ನಾವು ಆಡುಮಾತಿನಲ್ಲಿ ಉಪಯೋಗ ಮಾಡುವುದು ಎಲ್ಲರಿಗೂ ತಿಳಿದ ವಿಷಯ. ಸುಬ್ಬಮ್ಮನ ಏಕಾದಶಿ ಫಲಾಹಾರ - ಇದು ಹಾಸ್ಯ ಚಟಾಕಿಯ ಮಾತೆನ್ನುವುದೇನೋ ನಿಜ ! ಆದರೆ..... ಫಲಾಹಾರ ಅಂದ ಕೂಡಲೇ ಮನೆಯಲ್ಲಿ ಮಕ್ಕಳ ಬಾಯಿಯಲ್ಲಿ ನೀರೂರುವುದು ನಿಶ್ಚಿತ ! ಪ್ರತಿದಿನ ಹುಳಿ, ಕೂಟು, ಸಾರು, ಪಲ್ಯ ಎಂದು ನಿತ್ಯಗಟ್ಟಲೆ ಅಡಿಗೆ ತಿಂದು - ತಿಂದು ನಾಲಿಗೆ ಜಡ್ಡುಗಟ್ಟಿ ಹೋದಾಗ ಹಿರಿಯರ ಉಪವಾಸ ದಿನದಂದು ಮಕ್ಕಳ ಆನಂದ ಅಷ್ಟಿಷ್ಟೆಂದು ಬಣ್ಣಿಸಲಾಗದು ! ಸಿಹಿ ಸಜ್ಜಿಗೆ, ಗೊಜ್ಜವಲಕ್ಕಿ, ಕೋಸಂಬರಿ, ಎಂದು ಹಲವಾರು ರುಚಿ - ರುಚಿಯಾದ ತಿನಿಸುಗಳನ್ನು ಉಣ್ಣಬಹುದಲ್ಲವೇ ? ಉಪವಾಸ ಅಂದರೇನು ? ಶಬ್ದಕೋಶದಲ್ಲಿ ಉಪ (ಆ) ವಾಸವನ್ನು ಹತ್ತಿರ (ಭಗವಂತನ ಬಳಿ) ಇರುವುದು ಎಂದು ಅಥರ್ೈಸಲಾಗಿದೆ. ಅಂದಿನ ದಿನಗಳಲ್ಲಿ ದೇವರ ಪ್ರಾರ್ಥನೆ, ಜಪ, ತಪ, ಪೂಜೆ - ಪುನಸ್ಕಾರಗಳಲ್ಲಿ ಹಾಗೂ ಮತ್ತಿತರ ಧಾಮರ್ಿಕ ಕಾರ್ಯಗಳಲ್ಲಿ ನಿರತರಾಗಿರಬೇಕೆಂದು ಸಾಧು ಸಂತರ ಅಭಿಪ್ರಾಯವೂ ಕೂಡ ! ಕ್ಷುದ್ಭಾದೆ ಪರಿಹರಿಸಿಕೊಳ್ಳಲು ಸಾತ್ವಿಕ ಆಹಾರ ಸೇವನೆ ಮಾಡುವುದು ಕೂಡ ನಿಯಮವಾಗಿತ್ತು. ಆದರೆ ಕಾಲಾನುಕ್ರಮದಲ್ಲಿ ಫಲಾಹಾರ ಎನ್ನುವುದು ಮಾಪರ್ಾಡಾಗಿ ಫಲ (ವಿದ) ಆಹಾರವಾಗಿರಬಹುದು ಎಂದು ನನ್ನ ಗುಮಾನಿ ! ನೀವೇನು ಹೇಳುತ್ತಿರಿ ? ಹೊಟ್ಟೆಯನ್ನು ಚರ್ಮದ ಚೀಲವೆಂದು ಭಾವಿಸಿ ತುಂಬಿಸುತ್ತಲೇ ಇದ್ದರೆ ಜೀರ್ಣವಾಗುವ ಪ್ರಕ್ರಿಯೆಯಲ್ಲಿ ಏರುಪೇರಾಗದೆ ಏನಾದೀತು ? ಹಿತ-ಮಿತ ಆಹಾರಸೇವಿಸಿ (ಉಪವಾಸವೆಂಬ ನೆಪದಲ್ಲಿ) ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ನಮ್ಮ ಹಿರಿಯರು ಈ ರೀತಿಯ ಆಚರಣೆಯನ್ನು ಜಾರಿಗೆ ತಂದಿರಬಹುದು. ವೈಜ್ಞಾನಿಕವಾಗಿಯೂ ಇದು ಸರಿಯಲ್ಲವೇ ? ಪ್ರಕೃತಿಯ ಮಡಿಲಲ್ಲಿ ಎಷ್ಟೊಂದು ಫಲಗಳು ! ರುಚಿ, ಬಣ್ಣ, ಆಕಾರಗಳಲ್ಲಿ ನಿಜಕ್ಕೂ ಎಷ್ಟೊಂದು ವೈವಿಧ್ಯತೆ ! ಒಂದೊಂದು ಹಣ್ಣಿನಲ್ಲೂ ಒಂದು ವಿಶಿಷ್ಟ ಜೀವಸತ್ವವಿದೆ ; ಹೆಸರೇ ಹೇಳುವಂತೆ ಎಯಿಂದ ಜೆಡ್ ವರೆಗಿನ ಎಲ್ಲಾ ವಿಟಮಿನ್ಗಳು ಹಣ್ಣುಗಳಲ್ಲಿ ಸಮೃದ್ಧಿಯಾಗಿವೆ. ಹಣ್ಣುಗಳು ಜೀವಸತ್ವಗಳ ಖನಿ ಅಥವಾ ಆಗರ ಎಂದರೆ ಅತಿಶಯೋಕ್ತಿಯೆನಿಸದು ! ಪ್ರಕೃತಿಯ ಸೃಷ್ಟಿಯಲ್ಲಿ ವೈಚಿತ್ರಗಳು ಮಾತ್ರವೇ ಅಲ್ಲದೆ ಅನೇಕ ರಹಸ್ಯಗಳಡಗಿವೆ. ನಂಬಿಕೆ ಇಲ್ಲವೇ ? ಎಲ್ಲಾ ಹಣ್ಣುಗಳನ್ನೂ ಎಲ್ಲೆಂದರಲ್ಲಿ ತಿನ್ನಲು ಸಾಧ್ಯವೇ ಯೋಚಿಸಿನೋಡಿ. ಬಹಳ ಸುಲಭವಾಗಿ ಸದ್ದಿಲ್ಲದೆ ಗೊಳಕ್ ಎಂದು ನುಂಗಿ ಬಿಡಬಹುದಾದ ಹಣ್ಣೆಂದರೆ ಬಾಳೆಹಣ್ಣು. ಸುಲಿದ ಬಾಳೆಯ ಹಣ್ಣಿನಂದದಿ..... ಎಂದು ಕವಿ ಕನ್ನಡ ಭಾಷೆಯನ್ನು ಹಾಡಿಹೊಗಳಿದ್ದು ಗೊತ್ತಲ್ಲವೇ ? ಕಿತ್ತಳೆ ಹಣ್ಣು ಅಷ್ಟು ಸುಲಭವಾಗಿ ತಿಂದು ತೇಗುವಂತಿಲ್ಲ. ನಾರು ಬೀಜ ತೆಗೆಯದೆ ತಿನ್ನಲುಂಟೇ ? ಸ್ವಲ್ಪ ಶ್ರಮವಹಿಸಲೇಬೇಕು. ಹಣ್ಣು ಹುಳಿಯಾಗಿದ್ದರಂತೂ, ನಿಮ್ಮ ಮುಖಭಾವದಿಂದಲೇ (ಗುಟ್ಟಾಗಿ ನೀವು ತಿನ್ನುತ್ತಿದ್ದರೆ) ಕಂಡುಹಿಡಿಯಬಹುದು. ನೀವು ಹುಳಿ ಕಿತ್ತಳೆ ತಿನ್ನುತ್ತಿರುವಿರೆಂದು. ಹಲಸಿನ ಹಣ್ಣು - ಬಿಡಿ ! ನಿಮ್ಮ ಪಂಚಪ್ರಾಣವೂ ಅದರಲ್ಲಿದ್ದರೂ ಯಾವಾಗ ಅಂದರೆ ಆವಾಗ, ಎಲ್ಲಿ ಅಂದರಲ್ಲಿ, ಹೇಗೆ ತಿನ್ನುವುದು ? ಒಂದು ಕಡೆ ಕುಳಿತು ಅಂಗೈಗೆ ಎಣ್ಣೆ ಸವರಿ, ಹೊರಮೈನ ಮುಳ್ಳು ಕವಚ ಬಿಡಿಸಿ, ಬೀಜವನ್ನು ಉದರದಲ್ಲಡಗಿಸಿಕೊಂಡು ಹೊನ್ನಿನಂತೆ ಹೊಳೆಯುವ ರಸಭರಿತ ತೊಳೆಯ ಸವಿ ಸವಿಯಲು ಸಾಕಷ್ಟು ಕಾಲವ್ಯಯ ಮಾಡಬೇಕು, ಶ್ರಮವಂತೂ ಪಡಲೇಬೇಕು. ಹಲಸು, ಮಾವು, - ಇವೆರಡನ್ನು ಎಷ್ಟೇ ಪ್ರಯತ್ನ ಪಟ್ಟು ಮುಚ್ಚು ಮರೆಯಾಗಿಟ್ಟರೂ ಮುಂದಿನ / ಹಿಂದಿನ ಮನೆಯವರ ಮೂಗಿಗೆ ಹಣ್ಣುಗಳ ಪರಿಮಳ ಮುಟ್ಟದಿರಲು ಸಾಧ್ಯವೇ ? ಕಬರ್ೂಜ, ಕಲ್ಲಂಗಡಿ, ದ್ರಾಕ್ಷಿ, ದಾಳಿಂಬೆ ಮುಂತಾದ ಎಲ್ಲಾ ಹಣ್ಣುಗಳು ಸುಲಲಿತ ಸ್ವಾಸ್ಥ್ಯ. ಜೀವನಕ್ಕೆ ಅತ್ಯವಶ್ಯಕ ಎಂಬ ವಿಷಯದಲ್ಲಿ ಎರಡು ಮಾತಿಲ್ಲ ! ಆದರೆ............. ಸೀತಾಫಲ ತಿನ್ನುತ್ತಿರುವಾಗ ನನಗೆ ವಿಶೇಷ ಅನುಭವವಾಯಿತು ! ಒಂದು ಬಗೆಯ ಜ್ಞಾನೋದಯವಾಯಿತು. ಸೀತಾಫಲ ಎಲ್ಲೆಂದರಲ್ಲಿ ತಿನ್ನುವ ಹಣ್ಣಲ್ಲ, ಇದು ಮತ್ತೊಂದು ವಿಶೇಷವೆಂದರೆ ಇತರ ಹಣ್ಣುಗಳನ್ನು ತೊಳೆದು ಶುದ್ಧಮಾಡಿ ಅಂದವಾಗಿ ಕತ್ತರಿಸಿ ಹೋಳುಗಳಾಗಿ ತಟ್ಟೆಯಲ್ಲಿ ಜೋಡಿಸಿಟ್ಟರೆ, (ಮತ್ಯಾರಾದರು) ಮುಳ್ಳು ಚಮಚದಿಂದ ಚುಚ್ಚಿ ಬಾಯಿಯೊಳಗಿಟ್ಟುಕೊಂಡು ಚಪ್ಪರಿಸಿ ತಿನ್ನಲು ಸಾಧ್ಯವಿದೆ ? ಸೀತಾಫಲ ಈ ರೀತಿ ತಿನ್ನಲು ಸಾಧ್ಯವೇ ? ಸ್ವಲ್ಪ ಯೋಚಿಸಿನೋಡಿ ! ನಮ್ಮ ಸ್ವ-ಪ್ರಯತ್ನದಿಂದ ಮಾತ್ರ ಸಾಧ್ಯ. ಸ್ವಂತ ಪರಿಶ್ರಮದಿಂದ ತಿರುಳನ್ನು ತೆಗೆದು ನೀವು ಸವಿಯಬೇಕು. ಈ ಹಣ್ಣಿನ ಇನ್ನೊಂದು ವಿಶೇಷ ಗುಣ ಎಂದರೆ, ಇದರಲ್ಲಿ ತಿರುಳು ಕಡಿಮೆ, ಬೀಜಗಳು ಬಹಳ ಇವೆ. ತಿರುಳಿನ ಅಂಶ ಸ್ವಲ್ಪವಾದರೂ, ಅದರ ಸಿಹಿ ಸವಿದವರಿಗೇ ಗೊತ್ತು ! ಬಹಳವಿರುವ ಬೀಜಗಳಿಂದ ತಿರುಳನ್ನು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕರಿಸಬೇಕು. ಏಕಾಗ್ರತೆಯ ಅತ್ಯಂತ ಅಗತ್ಯವಿದೆ. ನಿಮ್ಮ ದೃಷ್ಟಿ / ಮನಸ್ಸು ಚಂಚಲವಾದರೋ ಬೀಜ ಗಂಟಲಿನಲ್ಲಿ ಸಿಕ್ಕಿಕೊಂಡು ಫಜೀತಿ ಪಡಬೇಕಾದ ಪ್ರಸಂಗ ಬರುವ ಸಾಧ್ಯತೆ ಇದೆ. ಎಂದಾದರೂ ನೀವು ಈ ಬಗ್ಗೆ ಯೋಚಿಸಿದ್ದೀರಾ ? ಇದನ್ನೇ `ಧ್ಯಾನ' ಎಂದೂ ಕೂಡ ಹೇಳಬಹುದಲ್ಲವೇ ? ಪಾರಮಾತ್ಮಿಕ ಸುಖ ಸೀತಾಫಲದ ತಿರುಳಿನ ರುಚಿಯಷ್ಟೇ ಸುಮಧುರ ! ಬೀಜಗಳ ಗುಂಪಿನಲ್ಲಿ `ತಿರುಳು' ಅಡಗಿ ಕುಳಿತಿದೆ. ಬೀಜಗಳೆಂಬ ಅಡೆ-ತಡೆಗಳನ್ನು ವಿಘ್ನಗಳನ್ನು ನಿವಾರಣೆ ಮಾಡಿದರೆ, ನಿಮಗೆ ತಿರುಳು ಲಭ್ಯವಾಗುವುದು ಖಂಡಿತ. ಅದಲ್ಲದೇ ಸೀತಾಫಲ ತಿನ್ನುವುದರಲ್ಲಿ ಇನ್ನೂ ಅನೇಕ ಲಾಭಗಳಿವೆ. ಬೀಜಗಳನ್ನು ತಿರುಳಿನಿಂದ ಬಿಡಿಸಿ, ಸ್ವಲ್ಪ ಸಿಗುವುದನ್ನು ತಿನ್ನುವಾಗ, ಅದರಲ್ಲೇ ಮಗ್ನರಾಗಿದ್ದಾಗ, ನರಗಳು ಶಾಂತವಾಗಿ, ನಮ್ಮನ್ನು ಸುಖನಿದ್ರೆಗೆ ಕರೆದೊಯ್ಯುವ ಸಾಧ್ಯತೆಗಳಿವೆ. ನಿದ್ರೆಗಾಗಿ ಗುಳಿಗೆಗಳನ್ನು ನುಂಗುವುದಕ್ಕೆ ಬದಲಾಗಿ ಸೀತಾಫಲವನ್ನು ನಿಧಾನವಾಗಿ ತಿನ್ನುವುದೇ ಒಳ್ಳೆಯದಲ್ಲವೇ ? ಇನ್ನೊಂದು ಗುಟ್ಟಿನ ಮಾತಿದೆ ! ಮನೆಯಲ್ಲಿ ಅಡಿಗೆ ಕೆಲಸದಲ್ಲಿ ಸಹಾಯ ಹಸ್ತ ನೀಡದೆ ಸುಮ್ಮನೆ ದೂರದರ್ಶನ, ಸಿನಿಮಾ ನೋಡುತ್ತಾ ಕಾಲ ಕಳೆಯುತ್ತಿರುವವರನ್ನು ಕೆಲಸ ಮಾಡಲು ಪ್ರೇರೇಪಿಸಲು ಒಂದು ಉಪಾಯ ಹೇಳುತ್ತೇನೆ. ಸೀತಾಫಲದ ತಿರುಳಿನಿಂದ ಹಲ್ವ ತಯಾರಿಸುತ್ತೇನೆಂದು ಹೊಸ ಅಡಿಗೆ ತಯಾರಿಸುವುದರಲ್ಲಿ ಸಹಾಯ ಹಸ್ತ ನೀಡಬೇಕೆಂದು ಕೇಳಿಕೊಂಡು ಒಂದು ಬುಟ್ಟಿಯಲ್ಲಿ ಸೀತಾಫಲವನ್ನು ತಂದಿರಿಸಿರಿ, ಬೀಜದಿಂದ ತಿರುಳು ಬೇರ್ಪಡಿಸುವುದರಲ್ಲಿ ಎಷ್ಟು ಸಮಯ ಆಗಬಹುದೆಂದು ಆಲೋಚಿಸಿ ! ನನ್ನ ಈ ಹರಟೆ ನಿಮ್ಮನ್ನು ಚಿಂತನೆಗೆ ಹಚ್ಚಿದರೆ, ನನ್ನ ಬರಹ ನೀವು ಖಂಡಿತ ಮೆಚ್ಚಿದ್ದೀರಿ ಎಂದಾಯಿತು.
(ಕನ್ನಡ ಸಂಕಲನ - ಜುಲೈ 1999)
Monday, March 17, 2008
Subscribe to:
Post Comments (Atom)

1 comment:
Congrats on resolving the font issue on your blog. Keep writing.
Regards
Post a Comment