ನೀರವತೆಯಲ್ಲಿ ನೆಮ್ಮದಿ.....(ಲೇಖನ)
ನಗರ ಜೀವನದ ಸತತ ಸದ್ದು - ಗದ್ದಲದಲ್ಲಿ ನೆಮ್ಮದಿ ಕಾಣಬೇಕಾದರೆ ನಿಶ್ಯಬ್ಧತೆಯು ಇಂದು ಎಂದಿಗಿಂತಲೂ ಅಗತ್ಯವೆನಿಸಿದೆ. ಮನುಷ್ಯನು ಆತ್ಮಚಿಂತನೆ ಮಾಡಬೇಕಾದರೆ ಏಕಾಂತ ವನ್ನು ಬಯಸುವುದು ಸಹಜ. ಅದರಿಂದಲೇ ಹಿಂದೆ ಸಂಸಾರದ ಕರ್ತವ್ಯಗಳನ್ನು ಮುಗಿಸಿ, ಆಧ್ಯಾತ್ಮಿಕ ಮಾರ್ಗವನ್ನು ಅರಸಿ, ವಾನಪ್ರಸ್ಥದ ಕಡೆಗೆ ಗಮನ ನೀಡುತ್ತಿದ್ದರು. ಆದುದರಿಂದಲೇ ಅದು ವನದ ಕಡೆಗೆ ಪ್ರಸ್ಥಾನವೆನಿಸಿತು ಆದರೆ ನಮ್ಮ-ನಿಮ್ಮಂತಹ ಸಾಮಾನ್ಯ ಜನಗಳಿಗೆ ಇದು ಸುಲಭ ಸಾಧ್ಯವೇ ? ಏಕಾಂತವನ್ನು ಬಯಸಿ ಹಿಮಾಲಯದ ಗುಹೆಗಳಲ್ಲಿ ಅಲೆದಾಟ ಏಕೆ ? ಚಿಂತನ - ಮನನ ಮಾಡಲು ಮನಸ್ಸಿನ ಆಳದಲ್ಲಿ ಸಾಧ್ಯವಿಲ್ಲವೇ ? ಯೋಚಿಸಿನೋಡಿ ! ಮೌನ ದಲ್ಲಿ ಮಾತ್ರ ನಾವು ಈ ಜೀವನದ ಮಧುರರಾಗದ ಅನ್ವೇಷಣೆ ಮಾಡಲು ಸಾಧ್ಯ. ಆದರೂ ಸಹ ನಮ್ಮ ದಿನದ ಬಹುಪಾಲು ಅರ್ಥವಿಲ್ಲದ ಮಾತು - ಕಥೆಗಳಲ್ಲಿ ವ್ಯರ್ಥವಾಗಿ ಕಳೆದುಹೋಗುತ್ತದೆ. ನಿಶ್ಯಬ್ಧವಾಗಿ ಬೀಸುವ ತಂಗಾಳಿಯ ವಾತಾವರಣವನ್ನು ಜನಗಳ ಮಾತಿನ ಜೋರುಶಬ್ಧ, ಕರ್ಕಶವಾದ ಹಾಡುಗಳು, ವಾಹನಗಳ ಓಡಾಟ, ಅವುಗಳ ಹಾನರ್್ಗಳ ಶಬ್ದ ಕಲುಷಿತಗೊಳಿಸುತ್ತದೆ. ರಸ್ತೆಯಲ್ಲಿ ಶಾಂತವಾಗಿ ನಡೆದುಹೋಗಲು ಸಾಧ್ಯವೇ ? ನಮ್ಮ ಮನಸ್ಸಿನಲ್ಲಿ ಪ್ರತಿ ನಿಮಿಷವೂ ಎದ್ದೇಳುವ ಭಾವನೆಗಳ ತಳಮಳ-ತಾಕಲಾಟ ಕ್ಷೊಭೆ, ಸಂಕಟಗಳ ಮೇಲೆ ಪರದೆ ಹಾಕಲು ನಾವು ಈ ಸದ್ದು - ಗದ್ದಲಕ್ಕೆ ಮರೆಹೊಕ್ಕಿರಬಹುದೆಂದನ್ನಿಸುತ್ತದೆ ! ಪರಮಾತ್ಮನ ನಿಲಯಗಳಾದ ದೇವಾಲಯಗಳಲ್ಲಿ, ಶಾಂತ ವಾತಾವರಣ ತಾಂಡವಾಡಬೇಕಾದ ಸ್ಥಳಗಳಲ್ಲಿಯೂ ಸಹ ಎಷ್ಟೊಂದು ಗಲಾಟೆ ! ಪರಮಾತ್ಮನ ಸಂದೇಶಗಳನ್ನು ಜನಗಳಿಗೆ ಮುಟ್ಟಿಸಲು ಧ್ವನಿವರ್ಧಕಗಳ ಮೂಲಕ ಕಿರುಚಿ ತಿಳಿಸುವ ಅವಶ್ಯಕತೆ ಇದೆಯೇ ? ದೇವರವಾಣಿಗೆ ಧ್ವನಿವರ್ಧಕಗಳೇಕೆ ? ಭಗವಂತ ನಮ್ಮ ಹೃದಯದಲ್ಲಿಯೇ ಅಡಗಿ ಕುಳಿತಿದ್ದಾನೆ. ನಮ್ಮ ಹೃದಯದ, ಅಂತರಂಗದ, ಗವಿ-ಗುಹೆಗಳಲ್ಲಿಯೇ ನಿಶ್ಚಿಂತೆ, ಪ್ರಶಾಂತತೆ, ಶಾಂತಿ-ಸಮಾಧಾನ ಪಡೆಯ ಬಲ್ಲೆವು. ದಿನದ ಅಂತ್ಯದಲ್ಲಿ ನಾವು ಮಲಗುವ ಮುನ್ನ ಅಂದು ನಾವು ಆಡಿದ ಮಾತುಗಳ ಬಗ್ಗೆ ಪಯರ್ಾಲೋಚಿಸಿ ಮನನ ಮಾಡಿದ್ದೇ ಆದರೆ, ನಾವು ನಮ್ಮನ್ನು ತಿದ್ದಿಕೊಳ್ಳಲು ಸಹಾಯಕವಾಗುತ್ತದೆ. ನಮ್ಮ ಮಾತುಗಳು ಸಹಜವಾಗಿತ್ತೇ, ಭಾವೋದ್ರೇಕವಾಗಿತ್ತೇ, ಅಥವಾ ಸುತ್ತ-ಮುತ್ತ ಇರುವ ಅವ್ಯವಸ್ಥೆ, ಆತಂಕ, ಗಲಾಟೆಗೆ ಮತ್ತಷ್ಟು ಸದ್ದು-ಗದ್ದಲ ಬೆರೆಸಿದಂತಿತ್ತೇ ಎಂಬುದಾಗಿ ಯೋಚಿಸಬೇಕು. ಸಮಾಧಾನಚಿತ್ತದಿಂದ ಮಾತ್ರ ಸೃಷ್ಟಿಯ ಸೊಬಗನ್ನು ಸವಿಯಲು ಸಾಧ್ಯವಾಗುತ್ತದೆ. ಅರಳಿದ ಸುಮಗಳ ಸೌಗಂಧ-ಸೌಂದರ್ಯ, ಹಸಿರು ಗಿಡ-ಮರಗಳಿಂದ ನಿಬಿಡವಾಗಿರುವ ದಿವ್ಯ ಅರಣ್ಯಗಳಲ್ಲಡಗಿರುವ ನಿಗೂಢತೆಯ ಅರಿವು ಉಂಟಾಗುತ್ತದೆ. ಪ್ರಕೃತಿ ಉದಾರ ಮಾತೆ ಜಗತ್ತಿಗೆ ಅವಳು ನೀಡಿರುವ ಪುಷ್ಪಗಳು ಸೌಂದರ್ಯದ ಖನಿಗಳು ! ಅವುಗಳ ಬಣ್ಣ, ಸುಗಂಧ ಮನಸ್ಸನ್ನಾಕಷರ್ಿಸುತ್ತದೆ. ಇವುಗಳನ್ನು ನಾವು ಬೇಡದೆಯೇ ನೀಡಿದ್ದಾಳೆ ಪ್ರಕೃತಿ ನಮಗೆ ! ಒಂದೆರಡು ಘಳಿಗೆ ಅವುಗಳನ್ನು ನಿಟ್ಟಿಸಿ ನೋಡಿ ನಲಿದಿದ್ದೇಆದರೆ ಮನಸ್ಸಿಗೆ ಎಷ್ಟು ಉಲ್ಲಾಸವಾಗುತ್ತದೆ ! ಸೂರ್ಯನು ಕ್ಷಿತಿಜದ ಕೆಳಗಿರುವಾಗ ಪಸರಿಸುವ ಹೊಂಬೆಳಕು, ಬಣ್ಣಗಳ ಆ ಅಪೂರ್ವನೋಟ, ಕ್ಷಣಿಕವಾದರೂ ಅದ್ಭುತ ! ಈ ವೀಕ್ಷಣೆ ನಮ್ಮ ದೃಷ್ಟಿಯನ್ನೇ ಅಲ್ಲದೆ ಮನಸ್ಸನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ. ಒಣಗಿದ ಮರದಿಂದ ಉದುರಿದ ಎಲೆಗಳ ಮೇಲೆ ನಡೆಯುವಾಗ ಉಂಟಾಗುವ ಸಪ್ಪಳ, ಹರಿಯುವ ನೀರಿನ ಜುಳು-ಜುಳು ಶಬ್ಧ, ಏರಿಳಿಯುವ ಅಲೆಗಳ ಧಾಟಿ - ಈ ಸಂಗೀತದೊಡನೆ ನಮ್ಮ ಜೀವನ ಮೇಳೈಸಲಿ ! ನಿಶ್ಯಬ್ಧ ಘಳಿಗೆಗಳು - ಅದರ ಅನುಭವ ನಮ್ಮ ನರ - ನಾಡಿಯಲ್ಲಿ ಹರಿದು ಹೋದಾಗ ಗಲಿ - ಬಿಲಿ ಅಶಾಂತಿಗೊಂಡ ಮನಸ್ಸು ಶಾಂತಗೊಳ್ಳುತ್ತದೆ. ಎಲ್ಲಾ ಮತ-ಧರ್ಮಗಳಲ್ಲಿಯೂ ಮೌನ, ಧ್ಯಾನಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಮೌನ ದಿಂದಿದ್ದು ಧ್ಯಾನದಲ್ಲಿ ಲೀನವಾದರೆ ಪರಮಾತ್ಮನ ಅನುಗ್ರಹ ಪಡೆಯಲು ಅದು ಅನುವು ಮಾಡಿಕೊಡುವುದು. ಸಮಸ್ಥ ಧರ್ಮ-ಮತಗಳ ಅಭಿಪ್ರಾಯ. ಈ ಅಂತಃಸುಖಂ (ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳುವಂತೆ) ಪಡೆಯಲು ಕಾಡಿಗೋ ಇಲ್ಲ ಊರಿಂದಾಚೆಗೋ ಹೋಗಬೇಕಾಗಿಲ್ಲ. ಸಮಾಜದಲ್ಲಿದ್ದು ಕೊಂಡೇ, ಸದ್ದು-ಗದ್ದಲದ ನಡುವೆ ಆತ್ಮೋನ್ನತಿ ಸಾಧಿಸಬಹುದು. ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವ ಗಾದೆಯಂತೆ ಅನೇಕ ಜಗಳ, ಕದನ, ಘರ್ಷಣೆಗೆ ಮಾತೇ ಮೂಲ ಕಾರಣವಾಗಬಹುದು. `ಮಾತು' ಬೆಳ್ಳಿಯಾದರೆ `ಮೌನ' ಬಂಗಾರವಲ್ಲವೇ ? ಇತರರ ನುಡಿಯನ್ನು ಗಮನವಿಟ್ಟು ಕೇಳುವುದು ಸದ್ಗುಣವೆನಿಸಿದೆ. ಈ ಸದ್ಗುಣ ಎಲ್ಲರಲ್ಲಿಯೂ ಕಂಡು ಬರುವುದಿಲ್ಲ. ಬೌದ್ಧಮತಕ್ಕೆ ಸೇರಿದ ಲಾಮ ಅನಾಗರೀಕ ಗೋವಿಂದರು ಒಂದೆಡೆ ಹೀಗೆ ಹೇಳುತ್ತಾರೆ : ನಿಶ್ಯಬ್ಧತೆಯನ್ನು ಆಲಿಸು ನಿಶ್ಯಬ್ಧತೆಯನ್ನು ದೃಷ್ಟಿಸು ನಿಶ್ಯಬ್ಧತೆಯನ್ನು ಆಘ್ರಾಣಿಸು ನಿಶ್ಯಬ್ಧತೆಯನ್ನು ಆಸ್ವಾದಿಸು ನಿಶ್ಯಬ್ಧತೆಯನ್ನು ಅನುಭವಿಸಿ ಆಲಿಂಗಿಸು ದಿನದಲ್ಲಿ ಕೆಲವು ಕ್ಷಣಗಳಾದರೂ ಪ್ರಪಂಚದ ಆಗು - ಹೋಗುಗಳನ್ನು ಮರೆತು ಮೇಲೆ ಹೇಳಿದ ಮಾತುಗಳನ್ನು ಮನನ ಮಾಡುವುದು ಸರಿಯೆನಿಸುವುದಲ್ಲವೇ ? (ಕನ್ನಡ ಸಂಕಲನ - ಸೆಪ್ಟೆಂಬರ್ 1999)
ನೀರವತೆಯಲ್ಲಿ ನೆಮ್ಮದಿ.....(ಲೇಖನ) ನಗರ ಜೀವನದ ಸತತ ಸದ್ದು - ಗದ್ದಲದಲ್ಲಿ ನೆಮ್ಮದಿ ಕಾಣಬೇಕಾದರೆ ನಿಶ್ಯಬ್ಧತೆಯು ಇಂದು ಎಂದಿಗಿಂತಲೂ ಅಗತ್ಯವೆನಿಸಿದೆ. ಮನುಷ್ಯನು ಆತ್ಮಚಿಂತನೆ ಮಾಡಬೇಕಾದರೆ ಏಕಾಂತ ವನ್ನು ಬಯಸುವುದು ಸಹಜ. ಅದರಿಂದಲೇ ಹಿಂದೆ ಸಂಸಾರದ ಕರ್ತವ್ಯಗಳನ್ನು ಮುಗಿಸಿ, ಆಧ್ಯಾತ್ಮಿಕ ಮಾರ್ಗವನ್ನು ಅರಸಿ, ವಾನಪ್ರಸ್ಥದ ಕಡೆಗೆ ಗಮನ ನೀಡುತ್ತಿದ್ದರು. ಆದುದರಿಂದಲೇ ಅದು ವನದ ಕಡೆಗೆ ಪ್ರಸ್ಥಾನವೆನಿಸಿತು ಆದರೆ ನಮ್ಮ-ನಿಮ್ಮಂತಹ ಸಾಮಾನ್ಯ ಜನಗಳಿಗೆ ಇದು ಸುಲಭ ಸಾಧ್ಯವೇ ? ಏಕಾಂತವನ್ನು ಬಯಸಿ ಹಿಮಾಲಯದ ಗುಹೆಗಳಲ್ಲಿ ಅಲೆದಾಟ ಏಕೆ ? ಚಿಂತನ - ಮನನ ಮಾಡಲು ಮನಸ್ಸಿನ ಆಳದಲ್ಲಿ ಸಾಧ್ಯವಿಲ್ಲವೇ ? ಯೋಚಿಸಿನೋಡಿ ! ಮೌನ ದಲ್ಲಿ ಮಾತ್ರ ನಾವು ಈ ಜೀವನದ ಮಧುರರಾಗದ ಅನ್ವೇಷಣೆ ಮಾಡಲು ಸಾಧ್ಯ. ಆದರೂ ಸಹ ನಮ್ಮ ದಿನದ ಬಹುಪಾಲು ಅರ್ಥವಿಲ್ಲದ ಮಾತು - ಕಥೆಗಳಲ್ಲಿ ವ್ಯರ್ಥವಾಗಿ ಕಳೆದುಹೋಗುತ್ತದೆ. ನಿಶ್ಯಬ್ಧವಾಗಿ ಬೀಸುವ ತಂಗಾಳಿಯ ವಾತಾವರಣವನ್ನು ಜನಗಳ ಮಾತಿನ ಜೋರುಶಬ್ಧ, ಕರ್ಕಶವಾದ ಹಾಡುಗಳು, ವಾಹನಗಳ ಓಡಾಟ, ಅವುಗಳ ಹಾನರ್್ಗಳ ಶಬ್ದ ಕಲುಷಿತಗೊಳಿಸುತ್ತದೆ. ರಸ್ತೆಯಲ್ಲಿ ಶಾಂತವಾಗಿ ನಡೆದುಹೋಗಲು ಸಾಧ್ಯವೇ ? ನಮ್ಮ ಮನಸ್ಸಿನಲ್ಲಿ ಪ್ರತಿ ನಿಮಿಷವೂ ಎದ್ದೇಳುವ ಭಾವನೆಗಳ ತಳಮಳ-ತಾಕಲಾಟ ಕ್ಷೊಭೆ, ಸಂಕಟಗಳ ಮೇಲೆ ಪರದೆ ಹಾಕಲು ನಾವು ಈ ಸದ್ದು - ಗದ್ದಲಕ್ಕೆ ಮರೆಹೊಕ್ಕಿರಬಹುದೆಂದನ್ನಿಸುತ್ತದೆ ! ಪರಮಾತ್ಮನ ನಿಲಯಗಳಾದ ದೇವಾಲಯಗಳಲ್ಲಿ, ಶಾಂತ ವಾತಾವರಣ ತಾಂಡವಾಡಬೇಕಾದ ಸ್ಥಳಗಳಲ್ಲಿಯೂ ಸಹ ಎಷ್ಟೊಂದು ಗಲಾಟೆ ! ಪರಮಾತ್ಮನ ಸಂದೇಶಗಳನ್ನು ಜನಗಳಿಗೆ ಮುಟ್ಟಿಸಲು ಧ್ವನಿವರ್ಧಕಗಳ ಮೂಲಕ ಕಿರುಚಿ ತಿಳಿಸುವ ಅವಶ್ಯಕತೆ ಇದೆಯೇ ? ದೇವರವಾಣಿಗೆ ಧ್ವನಿವರ್ಧಕಗಳೇಕೆ ? ಭಗವಂತ ನಮ್ಮ ಹೃದಯದಲ್ಲಿಯೇ ಅಡಗಿ ಕುಳಿತಿದ್ದಾನೆ. ನಮ್ಮ ಹೃದಯದ, ಅಂತರಂಗದ, ಗವಿ-ಗುಹೆಗಳಲ್ಲಿಯೇ ನಿಶ್ಚಿಂತೆ, ಪ್ರಶಾಂತತೆ, ಶಾಂತಿ-ಸಮಾಧಾನ ಪಡೆಯ ಬಲ್ಲೆವು. ದಿನದ ಅಂತ್ಯದಲ್ಲಿ ನಾವು ಮಲಗುವ ಮುನ್ನ ಅಂದು ನಾವು ಆಡಿದ ಮಾತುಗಳ ಬಗ್ಗೆ ಪಯರ್ಾಲೋಚಿಸಿ ಮನನ ಮಾಡಿದ್ದೇ ಆದರೆ, ನಾವು ನಮ್ಮನ್ನು ತಿದ್ದಿಕೊಳ್ಳಲು ಸಹಾಯಕವಾಗುತ್ತದೆ. ನಮ್ಮ ಮಾತುಗಳು ಸಹಜವಾಗಿತ್ತೇ, ಭಾವೋದ್ರೇಕವಾಗಿತ್ತೇ, ಅಥವಾ ಸುತ್ತ-ಮುತ್ತ ಇರುವ ಅವ್ಯವಸ್ಥೆ, ಆತಂಕ, ಗಲಾಟೆಗೆ ಮತ್ತಷ್ಟು ಸದ್ದು-ಗದ್ದಲ ಬೆರೆಸಿದಂತಿತ್ತೇ ಎಂಬುದಾಗಿ ಯೋಚಿಸಬೇಕು. ಸಮಾಧಾನಚಿತ್ತದಿಂದ ಮಾತ್ರ ಸೃಷ್ಟಿಯ ಸೊಬಗನ್ನು ಸವಿಯಲು ಸಾಧ್ಯವಾಗುತ್ತದೆ. ಅರಳಿದ ಸುಮಗಳ ಸೌಗಂಧ-ಸೌಂದರ್ಯ, ಹಸಿರು ಗಿಡ-ಮರಗಳಿಂದ ನಿಬಿಡವಾಗಿರುವ ದಿವ್ಯ ಅರಣ್ಯಗಳಲ್ಲಡಗಿರುವ ನಿಗೂಢತೆಯ ಅರಿವು ಉಂಟಾಗುತ್ತದೆ. ಪ್ರಕೃತಿ ಉದಾರ ಮಾತೆ ಜಗತ್ತಿಗೆ ಅವಳು ನೀಡಿರುವ ಪುಷ್ಪಗಳು ಸೌಂದರ್ಯದ ಖನಿಗಳು ! ಅವುಗಳ ಬಣ್ಣ, ಸುಗಂಧ ಮನಸ್ಸನ್ನಾಕಷರ್ಿಸುತ್ತದೆ. ಇವುಗಳನ್ನು ನಾವು ಬೇಡದೆಯೇ ನೀಡಿದ್ದಾಳೆ ಪ್ರಕೃತಿ ನಮಗೆ ! ಒಂದೆರಡು ಘಳಿಗೆ ಅವುಗಳನ್ನು ನಿಟ್ಟಿಸಿ ನೋಡಿ ನಲಿದಿದ್ದೇಆದರೆ ಮನಸ್ಸಿಗೆ ಎಷ್ಟು ಉಲ್ಲಾಸವಾಗುತ್ತದೆ ! ಸೂರ್ಯನು ಕ್ಷಿತಿಜದ ಕೆಳಗಿರುವಾಗ ಪಸರಿಸುವ ಹೊಂಬೆಳಕು, ಬಣ್ಣಗಳ ಆ ಅಪೂರ್ವನೋಟ, ಕ್ಷಣಿಕವಾದರೂ ಅದ್ಭುತ ! ಈ ವೀಕ್ಷಣೆ ನಮ್ಮ ದೃಷ್ಟಿಯನ್ನೇ ಅಲ್ಲದೆ ಮನಸ್ಸನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ. ಒಣಗಿದ ಮರದಿಂದ ಉದುರಿದ ಎಲೆಗಳ ಮೇಲೆ ನಡೆಯುವಾಗ ಉಂಟಾಗುವ ಸಪ್ಪಳ, ಹರಿಯುವ ನೀರಿನ ಜುಳು-ಜುಳು ಶಬ್ಧ, ಏರಿಳಿಯುವ ಅಲೆಗಳ ಧಾಟಿ - ಈ ಸಂಗೀತದೊಡನೆ ನಮ್ಮ ಜೀವನ ಮೇಳೈಸಲಿ ! ನಿಶ್ಯಬ್ಧ ಘಳಿಗೆಗಳು - ಅದರ ಅನುಭವ ನಮ್ಮ ನರ - ನಾಡಿಯಲ್ಲಿ ಹರಿದು ಹೋದಾಗ ಗಲಿ - ಬಿಲಿ ಅಶಾಂತಿಗೊಂಡ ಮನಸ್ಸು ಶಾಂತಗೊಳ್ಳುತ್ತದೆ. ಎಲ್ಲಾ ಮತ-ಧರ್ಮಗಳಲ್ಲಿಯೂ ಮೌನ, ಧ್ಯಾನಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಮೌನ ದಿಂದಿದ್ದು ಧ್ಯಾನದಲ್ಲಿ ಲೀನವಾದರೆ ಪರಮಾತ್ಮನ ಅನುಗ್ರಹ ಪಡೆಯಲು ಅದು ಅನುವು ಮಾಡಿಕೊಡುವುದು. ಸಮಸ್ಥ ಧರ್ಮ-ಮತಗಳ ಅಭಿಪ್ರಾಯ. ಈ ಅಂತಃಸುಖಂ (ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳುವಂತೆ) ಪಡೆಯಲು ಕಾಡಿಗೋ ಇಲ್ಲ ಊರಿಂದಾಚೆಗೋ ಹೋಗಬೇಕಾಗಿಲ್ಲ. ಸಮಾಜದಲ್ಲಿದ್ದು ಕೊಂಡೇ, ಸದ್ದು-ಗದ್ದಲದ ನಡುವೆ ಆತ್ಮೋನ್ನತಿ ಸಾಧಿಸಬಹುದು. ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವ ಗಾದೆಯಂತೆ ಅನೇಕ ಜಗಳ, ಕದನ, ಘರ್ಷಣೆಗೆ ಮಾತೇ ಮೂಲ ಕಾರಣವಾಗಬಹುದು. `ಮಾತು' ಬೆಳ್ಳಿಯಾದರೆ `ಮೌನ' ಬಂಗಾರವಲ್ಲವೇ ? ಇತರರ ನುಡಿಯನ್ನು ಗಮನವಿಟ್ಟು ಕೇಳುವುದು ಸದ್ಗುಣವೆನಿಸಿದೆ. ಈ ಸದ್ಗುಣ ಎಲ್ಲರಲ್ಲಿಯೂ ಕಂಡು ಬರುವುದಿಲ್ಲ. ಬೌದ್ಧಮತಕ್ಕೆ ಸೇರಿದ ಲಾಮ ಅನಾಗರೀಕ ಗೋವಿಂದರು ಒಂದೆಡೆ ಹೀಗೆ ಹೇಳುತ್ತಾರೆ : ನಿಶ್ಯಬ್ಧತೆಯನ್ನು ಆಲಿಸು ನಿಶ್ಯಬ್ಧತೆಯನ್ನು ದೃಷ್ಟಿಸು ನಿಶ್ಯಬ್ಧತೆಯನ್ನು ಆಘ್ರಾಣಿಸು ನಿಶ್ಯಬ್ಧತೆಯನ್ನು ಆಸ್ವಾದಿಸು ನಿಶ್ಯಬ್ಧತೆಯನ್ನು ಅನುಭವಿಸಿ ಆಲಿಂಗಿಸು ದಿನದಲ್ಲಿ ಕೆಲವು ಕ್ಷಣಗಳಾದರೂ ಪ್ರಪಂಚದ ಆಗು - ಹೋಗುಗಳನ್ನು ಮರೆತು ಮೇಲೆ ಹೇಳಿದ ಮಾತುಗಳನ್ನು ಮನನ ಮಾಡುವುದು ಸರಿಯೆನಿಸುವುದಲ್ಲವೇ ? (ಕನ್ನಡ ಸಂಕಲನ - ಸೆಪ್ಟೆಂಬರ್ 1999)
Saturday, April 12, 2008
Subscribe to:
Post Comments (Atom)

No comments:
Post a Comment