ಅಶ್ವತ್ಥಾಮನ ಅಧೋಲೋಕ(ಲೇಖನ)
ಇತ್ತೀಚಿಗೆ `ಪೋಕ್ರಾನ್'ನಲ್ಲಿ ನಡೆಸಲಾದ ಅಣ್ವಸ್ತ್ರ ಪರೀಕ್ಷೆಗಳ ಬಗ್ಗೆ ಪುಟಗಟ್ಟಲೆ ಪ್ರತಿಕ್ರಿಯೆಗಳು ಈಗಾಗಲೇ ಪ್ರಕಟವಾಗಿವೆ, ಇನ್ನೂ ಇಂದಿಗೂ, ಆಗುತ್ತಲೇ ಬಂದಿವೆ. ದೇದಿಪ್ಯಮಾನವಾದ ಆದಿಪರಾಶಕ್ತಿಯ ವಿಜಯ ವನ್ನು ಸೂಚಿಸುತ್ತದೆ ಎಂಬುದಾಗಿ ಬಹಳ ಮಂದಿ ಭಾವಿಸಿರುವುದು ನಿಜಕ್ಕೂ ಶೋಚನೀಯ ಸಂಗತಿ ! ಆಳವಾಗಿ ಆಲೋಚನೆ ಮಾಡಿ ನೋಡಿದ್ದೇ ಆದರೆ, `ಪೋಕ್ರಾನ್' ಮತ್ತು `ಛಾಗೈ' ನಭೋಮಂಡಲದಲ್ಲಿ, ದುಷ್ಟ `ಅಶ್ವತ್ಥಾಮ'ನ ಆಕೃತಿ ಮೂಡಿರುವುದು ಗೋಚರವಾಗುವುದರಲ್ಲಿ ಸಂದೇಹವಿಲ್ಲ.ಬರುತ್ತಿದ್ದ ಪ್ರತೀಕಾರ ಭಾವನೆ ವಿವೇಕ, ಮರುಕವನ್ನು ಮರೆಮಾಚಿತು. `ದ್ವೇಷ'ದ ಜ್ವಾಲೆಯಿಂದ ಸಮಸ್ತ `ಧರೆ'ಯನ್ನು ದಹಿಸಿಬಿಡಬೇಕೆಂದು ಹೊರಟಿದ್ದನು. ಅಶ್ವತ್ಥಾಮನ ಕ್ಷಿಪಣಿಯ ಮಾರ್ಗವು ವಕ್ರವಾದ ಕಲಿತನ ಎನ್ನಬಹುದು. ಅಸ್ತ್ರವಿದ್ಯೆಯಲ್ಲಿ ಮೇಧಾವಿಯೆನಿಸಿದ ಅವನ ತಂದೆ ದ್ರೋಣರು ಕುರುವಂಶದ ರಾಜಕುವರರಿಗೆ ಶಿಕ್ಷಕ ನೆನಿಸಿಕೊಳ್ಳುವ ಮೊದಲು ಅನುಭವಿಸಿದ ಅವಮಾನ, ನಿಂದೆ, ಅಶ್ವತ್ಥಾಮ ಎಂದೂ ಮರೆಯಲೇ ಇಲ್ಲ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅಶ್ವತ್ಥಾಮ ಹತಃ ಕುಂಜರ ಎಂದು ಹೇಳಿ ದ್ರೋಣನನ್ನು ವಧಿಸಿದ ಪಾಂಡವರನ್ನು ಕ್ಷಮಿಸಲು ಅವನಿಗಾಗಲಿಲ್ಲ. ಅವನ ಹೃದಯದಲ್ಲಿ ದ್ವೇಷದ ಕಿಡಿ ಬೂದಿಮುಚ್ಚಿ ಕುಳಿತಿತ್ತು. ಪ್ರಳಯಾಂತಕ ಯುದ್ಧ ಮುಗಿದಿದೆ, ರಾಜ ದುಯರ್ೋಧನ ಮರಣ ಶಯ್ಯೆಯಲ್ಲಿ ಇದ್ದಾನೆ. ಅಶ್ವತ್ಥಾಮನ ಪ್ರತೀಕಾರ ಕಿಡಿ ಹೊತ್ತಿಕೊಂಡಿತು. ಅಶ್ವತ್ಥಾಮ ಅಂತಕಾರಿ (ಣಜಡಿಟಟಿಚಿಣಠಡಿ) ಯಾದನು. ಹೆಣಗಳರಾಶಿಯನ್ನು ದಾಟಿಕೊಂಡು ಹೋಗಿ, ಆ ಕರಾಳ ರಾತ್ರಿಯಲ್ಲಿ ಪಾಂಡವರ ಕಗ್ಗೊಲೆಯನ್ನು ಮಾಡಿ ಮುಗಿಸುವೆನೆಂದು ನಿರ್ಧರಿಸಿ ಅವರಿಳಿದಿದ್ದ ಡೇರೆಯನ್ನು ಪ್ರವೇಶಿಸಿ ಪಾಂಡವ ಪುತ್ರರನ್ನು ಕಡಿದುಕೊಂದುಹಾಕಿದನು. ಇಷ್ಟರಿಂದ ಅವನ ದ್ವೇಷದ ಕಿಚ್ಚು ಅಡಗಲಿಲ್ಲ. ಬ್ರಹ್ಮಶೀರ್ಷ ಅಸ್ತ್ರದಿಂದ ಈ ಧರೆಯನ್ನು ನಾಶಮಾಡಿ ಅಭಿಮನ್ಯುವಿನ ವಿಧವೆ ಪತ್ನಿಯ ಗರ್ಭದಲ್ಲಿನ ಮಗುವನ್ನುಕೊಂದು ಬಿಡುವೆನೆಂದು ಹೊರಟುನಿಂತನು. ಪಾಂಡವ ವಂಶವನ್ನು ನಿನರ್ಾಮ ಮಾಡುವುದೇ ಅವನ ಉದ್ದೇಶವಾಗಿತ್ತು. ಈ ಅಂತಿಮ ಕ್ಷಣದಲ್ಲಿ ಪರಮಾತ್ಮನು ಬ್ರಹ್ಮಶೀರ್ಷ ಅಸ್ತ್ರವನ್ನು ನಿರರ್ಥಕಗೊಳಿಸಿ ಈ ಧರೆಯನ್ನು ಸರ್ವನಾಶದಿಂದ ತಪ್ಪಿಸಿ ಕಾಪಾಡಿದನು. ಅಶ್ವತ್ಥಾಮನ ಶಕ್ತಿ ಉಡುಗಿ ಹೋಯಿತು. ದುಷ್ಕರ್ಮದಿಂದಾಗಿ ಅಧೋಲೋಕಕ್ಕೆ ಶಾಶ್ವತವಾಗಿ ತಳ್ಳಲ್ಪಟ್ಟನು. ಯುಗಾಂತದಲ್ಲಿ ಇರಾವತಿ ಕವರ್ೆಯವರು ಅಶ್ವತ್ಥಾಮ ಸ್ವಧರ್ಮ - ಪರಧರ್ಮದ ನಡುವೆ ಅನಿಶ್ಚಿತ ಸ್ಥಿತಿಯಲ್ಲಿದ್ದವನೆಂದು ಅವನ ಗುಣವನ್ನು ಅಳೆದು ನೋಡಿದ್ದಾರೆ. ಬ್ರಾಹ್ಮಣನಾಗಿ ಹುಟ್ಟಿದರೂ ಕ್ಷತ್ರಿಯ ಧರ್ಮವನ್ನು ಆಚರಿಸುತ್ತಿದ್ದನು. ಯೋಧನ ಶಕ್ತಿ, ವೀರತನವಿದ್ದರೂ ಅದರೊಡನೆ ವಿವೇಕ ಸೇರ್ಪಡಿಸುವ ವಿವೇಚನೆಯಿರಲಿಲ್ಲ. ಅಣ್ವಸ್ತ್ರಗಳು ದೇಶಕ್ಕೆ ರಕ್ಷಣಾಕವಚವೆಂದೂ, ಹೆಮ್ಮೆ, ಶಕ್ತಿ, ಸಾಮಥ್ರ್ಯವನ್ನು ತೋರಿಸಲು ಅನುಕೂಲಕಾರಿಯೆಂದು ಭಾವಿಸಿರುವ ಅನೇಕರಂತೆ ಅಶ್ವತ್ಥಾಮನೂ ಸಹ ಶಸ್ತ್ರ - ವಿದ್ಯೆಯಲ್ಲಿ ನಂಬಿಕೆ ಇರಿಸಿದ್ದನು. ಆದರೆ, ಅಸ್ತ್ರವಿದ್ಯೆ ಕೇವಲ "ತಾಂತ್ರಿಕ ಸಾಮಥ್ರ್ಯ" ವನ್ನೆ ಅಲ್ಲದೆ "ನೀತಿ ತತ್ವಗಳನ್ನೂ" ಸಹ ಸೂಚಿಸುತ್ತದೆ. ಯಾವುದೇ ಘಟನೆ ಅಥವ ಪರಿಸ್ಥಿತಿಯನ್ನು ಸುಧಾರಣೆ ಮಾಡಿ, ಶಾಂತಿ, ಸ್ಥಾಪನೆ ಉದ್ದೇಶವಾಗಿರಬೇಕೇ ಹೊರತು, ಪರಿಸ್ಥಿತಿ ಹದಗೆಡುವಂತಾಗಬಾರದು. ಧರ್ಮ, ನೀತಿ, ವಿವೇಕ ಮಾರ್ಗವನ್ನು ಸತತವಾಗಿ ಅನುಸರಿಸಿ ನಡೆಯಬೇಕು. (ಣ ಣ ಚಿತಿಚಿಡಿಜಟಿಜ ಣಚಿಣ ಜಣಟಿರಣಜ ಣಜ "ಒಚಿಣಜಡಿ" ಜಿಡಿಠಟ ಣಜ "ಒಚಿಟಿಚಿಛಿ" ರಡಿಠಿಠಿಜಜ ಛಥಿ ಂತಿಚಿಣಣಚಿಟಚಿ' ಥಿಟಿಜಡಿಠಟಜ). ಭಾರತ, ಪಾಕಿಸ್ತಾನ, ಅಣ್ವಸ್ತ್ರಗಳನ್ನು ಸಿಡಿಸಿ ಅಶ್ವತ್ಥಾಮನ ಅಧೋಲೋಕಕ್ಕೆ ಕಾಲಿರಿಸಿದ್ದಾರೆ. ಅದು ಬೆಂಗಾಡು. ಅಲ್ಲಿ ಕಾಳಗ, ಕದನ, ಮತಿಭ್ರಂಶ - ಇವೇ ಯಥಾಸ್ಥಿತಿ - ವೈರಿಯ ಅಣುಗುಂಡಿಗೆ, ಅಣ್ವಸ್ತ್ರಗಳು ಉತ್ತರವಲ್ಲ ! ಯಾಕೆಂದರೆ ಅಣು ಯುದ್ಧದಲ್ಲಿ ಯಾರಿಗೂ ಜಯವಿಲ್ಲ ! "ಎರಡನೆಯ ಬಾರಿ" ಎನ್ನುವ ಹಾಗಿಲ್ಲ. ಅಣ್ವಸ್ತ್ರಗಳ ಶೇಖರಣೆ ಯಾವುದೇ ದೇಶ ಮಾಡಿದ್ದರೂ ಸಹ ಅವರು ತಮ್ಮ ಹಾಗೂ ತಮ್ಮ ವೈರಿಗಳನ್ನೇ ಅಲ್ಲದೆ, ಕೋಟ್ಯಾಂತರ ಜನಗಳ ನಿಮರ್ೂಲ ಮಾಡಬೇಕೆಂಬ ಉದ್ದೇಶ ಹೊಂದಿದ್ದಾರೆ ಎಂದೇ ಸ್ಪಷ್ಟವಾಗುತ್ತದೆ. ಕುರುಕ್ಷೇತ್ರ ಯುದ್ಧದ ಪ್ರಾರಂಭದ ಮೊದಲು ದುಯರ್ೋಧನನನ್ನು ಕುರಿತು ಕೃಷ್ಣ ಪರಮಾತ್ಮ ಹೀಗೆ ಹೇಳುತ್ತಾನೆ - ಯಾವುದೆ ಮನುಷ್ಯ ಎಲ್ಲರೂ ಸಾಯುವರೆಂದು ತಿಳಿದಿದ್ದೂ ಯುದ್ಧರಂಗಕ್ಕೆ ಇಳಿಯುವನೇ ? ಈ ಮಾತು ಇಂದು ಎಷ್ಟು ಸತ್ಯ ! ನಾವು - ನೀವು, ಈ ವಿಷಯದ ಬಗ್ಗೆ ಚಿಂತಿಸಬೇಡವೇ ?
Tuesday, April 22, 2008
Subscribe to:
Post Comments (Atom)

No comments:
Post a Comment