ಸತ್ಯಯುಗ ಸಮೀಪಿಸುತ್ತಿದೆಯೇ?
ಮುಂಬಯಿಗೆ ಮತ್ತೆ ಬಂದರೆಗಿತು ಗುಡುಗು, ಸಿಡಿಲು, ಬೆಂಕಿಯ ಮಳೆ! ವಿಧವೆಯರ, ಅನಾಥ ಮಕ್ಕಳ ಕಣ್ಣೀರಿನ ಸೆಲೆ ಬತ್ತುವ ಮೊದಲೇ ಮತ್ತೇ ಬಂದಿತು ಮುಗಿಲು ಮುಟ್ಟಿದ ರೋಧನ ಶೋಕದ ಪ್ರತಿಧ್ವನಿ! ಮುಂಬೈ ಜನತೆ (ಮುಂಬೈಕರ್ಗಳು) ಎಷ್ಟೇ ಆಘಾತ, ಅನಾಹುತ, ಅವಗಡಗಳು ಸಂಭವಿಸಿದರೂ, ಎದೆಯೊಡ್ಡಿ, ಪ್ರಾಣವನ್ನೇ ಪಣವಾಗಿಟ್ಟು, ಹೋರಾಡುವುದೇ ಅಲ್ಲದೆ, ಪರಿಸ್ಥಿತಿ ಸ್ಥಿಮಿತಗೊಂಡನಂತರ ಮತ್ತೇ ಚೇತರಿಸಿಕೊಂಡು, ತಲೆಎತ್ತಿ ನಿಲ್ಲುತ್ತಾರೆ ಎಂದು ಹೇಳುವುದೇ ಎಲ್ಲರಿಗೂ ಅಭ್ಯಾಸವಾಗಿ ಹೋಗಿದೆ. ಸಹನೆ, ಸೈರಣೆ, ಸಮಾಧಾನಕ್ಕೂ ಮಿತಿ ಎಂಬುದೇ ಇಲ್ಲವೇ? ಗಾಯಕ್ಕೆ ಉಪ್ಪು ಸವರಿದಂತೆ ನರಸತ್ತ, ನಾಚಿಕೆಗೆಟ್ಟ್ಟ ರಾಜಕಾರಣಿಗಳು, ನರಮೇಧ ನಡಿಯುತ್ತಿದ್ದರೂ ಕಂಡೂ ಕಣ್ಮುಚ್ಚಿ ಕುಳಿತಿರುವುದನ್ನು ನೋಡಿ ಜನತೆ ರೊಚ್ಚಿಗೆದ್ದಿರುವುದರಲ್ಲಿ ಆಶ್ಚರ್ಯವೇನು? ಇಂತಹ ರಾಜಕಾರಣಿಗಳು ನಮಗೆ ಬೇಕೆ? ಬೊಕ್ಕಸ ಬರಿದು ಮಾಡಿ, ಸ್ವಂತಕ್ಕಾಗಿ, ಸ್ವಾರ್ಥಕ್ಕಾಗಿ ಹಣ-ಹುದ್ದೆ ಬಳಸಿಕೊಳ್ಳುವ, ಇಂತಹ ರಾಜಕಾರಣಿಗಳು ರಾಜ್ಯ - ದೇಶವನ್ನು ಹೇಗೆ ಮುನ್ನಡೆಸುವರು? ಪುರಾಣ-ಪುಣ್ಯಕಥೆಗಳಲ್ಲಿ ಓದಿದ್ದ ರಾಕ್ಷಸರು, ರಕ್ತಬೀಜಾಸುರರು, ವಿವಿಧ ಕಡೆಗಳಿಂದ, ವಿವಿಧ ರೂಪಗಳಲ್ಲಿ ಬಂದೆರಗಿ, ಮುಗ್ಧಜೀವಿಗಳನ್ನು ಕೊಂದು, ಶಾಂತಿ ಕದಡಿ, ಹೋಗುತ್ತಿದ್ದಾರೆ. ಅವರು ಏನು ಸಾಧಿಸಬೇಕೆಂದಿದ್ದಾರೆ? ದಯೆ-ದಾಕ್ಷಿಣ್ಯ ಪಾಪಭಯ, ಮುಂತಾದ ಭಾವನೆಗಳೊಂದೂ ಇಲ್ಲದ ಬರಡಾದ ಅವರ ಮಾನಸಿಕ ಸ್ಥಿತಿ ಹೇಗಿರಬಹುದು? ಪ್ರಜಾಪ್ರಭುತ್ವ ಎಂದರೇನು? ಸ್ವೇಚ್ಛಾಚಾರವೇ? 'ಕಲಿಯುಗ' ಅಂತ್ಯಗೊಳ್ಳುತ್ತಿದೆಯೇ? 'ಸತ್ಯಯುಗ', ಸಮೀಪಿಸುತ್ತಿದೆಯೇ? ನನ್ನ ಮನಸ್ಸಿನಲ್ಲಿ ಎದ್ದೇಳುತ್ತಿರುವ ಈಮೇಲಿನ ಪ್ರಶ್ನೆಗಳಿಗೆ ಉತ್ತರಗಳಿವೆಯೇ?
ವನಜರಾಜನ್11.12.08
Wednesday, December 17, 2008
Saturday, May 17, 2008
"ಪದವಿ" ಎಂಬ ಹೆಬ್ಬಾವಿನ ಹಿಡಿತದಿಂದ ಪಾರಾಗುವುದು ಹೇಗೆ ?
ಶ್ರೀ ವ್ಯಾಸ, ವಾಲ್ಮೀಕಿಗಳಂತಹ ಮಹಾ ಪ್ರಾಜ್ಞರಿಂದ ವಿರಚಿತವಾದ, `ಮಹಾಭಾರತ' ರಾಮಾಯಣದಂತಹ ಬೃಹದ್ಗ್ರಂಥದಲ್ಲಿ ಹಾಸು ಹೊಕ್ಕಾಗಿರುವ ಅನೇಕ ಕಥಾ ಪ್ರಸಂಗಗಳು ಮಾನವನ ಮನಸ್ಸಿನ ಪದರು - ಪದರುಗಳಲ್ಲಿನ ಭಾವಾನುಭವಕ್ಕೆ ಹಿಡಿದ ಕನ್ನಡಿಗಳಂತಿವೆ. `ಪದವಿ' ಸ್ಥಾನ - ಮಾನ ಮನುಷ್ಯನನ್ನು ಅಲ್ಲಾಡಿಸಿಬಿಡಬಹುದು. ಕೆಲವೊಮ್ಮೆ ಅವನಲ್ಲಿರುವ `ಸಾತ್ವಿಕ' ಭಾವನೆಗಳನ್ನು ಹೊರತರಬಹುದು, ಅಥವಾ ಅವನಲ್ಲಡಗಿಕೊಂಡಿರುವ ಬಚ್ಚಿಟ್ಟ `ನೀಚತನ' ಬಯಲಾಗುವ ಸಾಧ್ಯತೆ ಸಹ ಇದೆ ! ಯಶಸ್ಸು, ಏಳಿಗೆ `ಅಭಿವೃದ್ಧಿ' ಅಮಲೇರಿಸಬಲ್ಲದು (Heady), `ಮಹಾಭಾರತ' ದಲ್ಲಿ ಬರುವ ಕಥೆಗಳ ವಿಶಾಲತ್ವ, ವೈವಿಧ್ಯತೆ ನಮ್ಮನ್ನು ನಿಜಕ್ಕೂ ಬೆರಗುಗೊಳಿಸುವುದು. ಈ ಕಥೆಗಳ ಸಮೃದ್ಧ ಹೆಣಿಗೆಯನ್ನು (Tapestry) ಬಂದಿಸಿಟ್ಟಿರುವ ಒಂದು ನೂಲೆಳೆಯೆಂದರೆ ಕಥೆಗಳ `ಪಾತ್ರ'ಗಳಲ್ಲಿ ಕಂಡುಬರುವ ಭಾವನೆಗಳ `ಮಿತಿಮೀರಿದ' ಪ್ರದರ್ಶನ (Excess) ಇದರಿಂದಾಗಿ `ಸಾತ್ವಿಕ ಮನಸ್ಸು' ಬಗ್ಗಡವಾಗುವುದನ್ನೂ ಹಾಗೂ ದೈವೀದತ್ತವಾದ ಗುಣವುಳ್ಳವರು `ರಾಕ್ಷಸ ಪ್ರವೃತ್ತಿ'ಗೆ ಇಳಿಯುವುದನ್ನು ನೋಡುತ್ತೇವೆ. ಉನ್ನತ ಸ್ಥಾನವನ್ನಲಂಕರಿಸಿರುವವರಿಗೆ "ನಹುಷ"ನ ಕಥೆ ಪಾಠ ಕಲಿಸುತ್ತದೆ. ಓರ್ವ ಋಷಿಯಿಂದ ಶಾಪಗ್ರಸ್ತನಾದ ದೇವೇಂದ್ರ ತನ್ನ `ಪದವಿ' ಕಳೆದುಕೊಂಡು ನಾಚಿ, ತಲೆಮರೆಸಿಕೊಂಡು ಹೊರಟು ಹೋಗುತ್ತಾನೆ. ನಂತರ ದೇವತೆಗಳು, ಪಾಂಡವರ ಹಾಗೂ ಕೌರವರ ಪೂರ್ವಜನಾದ "ನಹುಷ"ನನ್ನು ಆ `ಪದವಿ'ಯನ್ನು ಸ್ವೀಕರಿಸಲು ಕೇಳಿಕೊಂಡರು. ಸದ್ಗುಣಗಳ `ಖನಿ' ಎನಿಸಿದ ನಹುಷನು, ಬಹಳ ಕಾಲದವರೆಗೆ ನ್ಯಾಯ, `ನೀತಿ', ಧರ್ಮವನ್ನಾಧರಿಸಿ, ಪ್ರಭುತ್ವವನ್ನು ನಡೆಸಿದನು. ಕಾಲ ಸರಿಯಿತು. `ಪದವಿ', `ಅಧಿಕಾರ', ದ ವಿಷ, ನಿಧಾನವಾಗಿ ಅವನ ನರ - ನಾಡಿಗಳಲ್ಲಿ ಹರಿಯಲಾರಂಭಿಸಿತು. ಅದರ ಪ್ರಭಾವದಿಂದಾಗಿ ಅವನು ದುರಹಂಕಾರಿ, ಕ್ರೂರಿಯಾಗಿ ಬದಲಾಯಿಸಿದನು. ದೇವಗಣ ಪಶ್ಚಾತ್ತಾಪ ಗೊಂಡಿತು. ಅವನ ಹೀನವರ್ತನೆ ಪರಮಾವಧಿತಲಪಿತು. ಅವನ ಹೀನ ದೃಷ್ಟಿ ದೇವೇಂದ್ರನ ಪತ್ನಿ ಶಚೀದೇವಿಯ ಮೇಲೆ ಬಿದ್ದಿತ್ತಲ್ಲದೆ, ಋಷಿ ಅಗಸ್ತ್ಯರನ್ನು ಅವಮಾನ ಅವಹೇಳನ ಮಾಡಲೂ ಸಹ ಅವನು ಹೇಸಲಿಲ್ಲ. ಅಂದಿನಿಂದ ಅವನ ಅವನತಿ ಪ್ರಾರಂಭವಾಯಿತು. ಅವರ ಶಾಪದಿಂದ `ನಹುಷ'ನು ಹೆಬ್ಬಾವಾಗಿ ಸ್ವರ್ಗದಿಂದ ದಟ್ಟ ಅರಣ್ಯದಲ್ಲಿ ಬಂದು ಬೀಳುತ್ತಾನೆ. "ಪದವಿ", ಹೇಗೆ ಹೆಬ್ಬಾವಾಗಿ ತನ್ನ ಹಿಡಿತದಲ್ಲಿ ಸಿಕ್ಕಿ ಬಿದ್ದವನನ್ನು ನಾಶಮಾಡಬಲ್ಲದು ಎಂಬುದಕ್ಕೆ ನಹುಷನ ಕಥೆ ದೃಷ್ಟಾಂತವೆನಿಸುತ್ತದೆ. ಇದು ದ್ವಾಪರಯುಗದ ಘಟನೆಯಾಗಿರಬಹುದು. ಆದರೆ ಇಂದೂ, ಈಗಲೂ, ಈ `ಮೌಲ್ಯ'ಗಳು ಪ್ರಸ್ತುತವೆನಿಸಿವೆ. ಉನ್ನತ ಸ್ಥಾನವನ್ನಲಂಕರಿಸುವವರಿಗೆ ಈ ಕಥೆ ಪಾಠ ಕಲಿಸುತ್ತದೆ. ಮಾರ್ಗದರ್ಶನ ನೀಡುತ್ತದೆ. `ವ್ಯಕ್ತಿ'ಗಳಾಗಲೀ ಸಂಘ - ಸಂಸ್ಥೆಗಳಾಗಲೀ ಇಂತಹ ಸಂದರ್ಭದಲ್ಲಿ ಹೇಗೆ ವತರ್ಿಸಬೇಕು ? `ಸಂಯಮ' ಸಾಧನೆ ಯಾವ ರೀತಿ ಮಾಡಬೇಕು ಎಂಬುದರ ಮೇಲೆ ಬೆಳಕು ಚೆಲ್ಲಿದೆ, `ಭಗವದ್ಗೀತೆ' ಕುರುಕ್ಷೇತ್ರದ ರಣಭೂಮಿಯಲ್ಲಿ ! ಇದೇ `ಅನುಶಾಸನ' ಯಾವುದೇ ಕೋಟಿ - ಕೊತ್ತಳ ರಾಜನನ್ನು ಕಾಪಾಡಲು ಸಾಧ್ಯವಿಲ್ಲ. `ಪದವಿ'ಯೊಡನೆ ಕೂಡಿ ಬರುವ `ಪ್ರಲೋಭನ'ಗಳಿಂದ ಆಕರ್ಷಣೆಗಳಿಂದ ಪಾರಾಗಲು, ಒಂದೇ ಮಾರ್ಗ ಎಂದರೆ `ಅನುಶಾಸನ' - ಅಂದರೆ `ಸ್ವ - ಪರೀಕ್ಷೆ'. ತನ್ನನ್ನು ತಾನೇ ಪರೀಕ್ಷೆಗೆ ಒಳಪಡಿಸಿಕೊಂಡು ತಿದ್ದಿಕೊಂಡರೆ ಮಾತ್ರ `ರಾಜ' ರಾಜ್ಯವನ್ನು ಆಳಬಲ್ಲನು, ಪತನದಿಂದ ಪಾರಾಗಬಲ್ಲನು. ಮರ್ಯಾದ ಪುರುಷ ಶ್ರೀರಾಮ `ಭರತ'ರಂತಹ ರಾಜರು, ನಮಗೆ ಮಾರ್ಗದರ್ಶನ ನೀಡಿದ್ದಾರೆ. ಮಾದರಿ ರಾಜರನ್ನು ನಾವು ಚುನಾಯಿಸುವುದು, `ಸೂಜಿಯನ್ನು ಹುಲ್ಲು ಮೆದೆಯಲ್ಲಿ ಹುಡುಕಿದಂತೆಯೆ' ಕಷ್ಟ ಸಾಧ್ಯವಾದ ಕೆಲಸವಾಗಿದೆ. ನಾವು ಇಂದು ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೇವೆ. ಪ್ರಜಾಪ್ರಭುತ್ವವಾದ ನಮ್ಮ ನಾಡು ಭರತ ದೇಶ, ಮತ್ತೊಮ್ಮೆ ಪ್ರಜಾಹಿತ ಚಿಂತಕರ ಮುಂದಾಳುತ್ವದಲ್ಲಿ ಕಾಯಕಲ್ಪ ಪಡೆದು ಜಗತ್ತಿನಲ್ಲಿಯೇ `ಶ್ರೇಷ್ಠ' ದೇಶವೆಂದು ಖ್ಯಾತಿ ಪಡೆಯಬೇಕೆಂಬುದೇ ನಮ್ಮ, ನಿಮ್ಮೆಲ್ಲರ ಆಶಯ ! `ಪ್ರಜೆ'ಗಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲಸಲಿ, ಈ ವರ್ಷದ `ಯುಗಾದಿ' ನಿಜವಾಗಿ `ನವಯುಗ'ದ ನಾಂದಿಯಾಗಲಿ ಎಂದು ನಾವೆಲ್ಲರೂ ಪರಮಾತ್ಮನನ್ನು ಪ್ರಾಥರ್ಿಸೋಣ ! `ಜೈ ಭಾರತ ಮಾತೆ, ಜೈ ಕನ್ನಡ ದೇವಿ' - ನಿನಗೆ ಕೋಟಿ ಕೋಟಿ ನಮನಗಳು.(ಕನ್ನಡ ನುಡಿಮುತ್ತು - ಏಪ್ರಿಲ್ 1998)

Friday, May 16, 2008
ಪಾದರಕ್ಷೆಗಳು.... ಅದಲು ಬದಲಾದಾಗ.
"ಪಾದರಕ್ಷೆ"ಗಳನ್ನು ಬಹಳ ಹಿಂದಿನ ಕಾಲದಿಂದಲೂ ಬಳಕೆ ಮಾಡುತ್ತಿದ್ದುದರ ಬಗ್ಗೆ ವೇದ "ಪುರಾಣ" "ರಾಮಾಯಣ", "ಮಹಾಭಾರತ"ಗಳೇ ಮುಂತಾದ ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖವಿದೆ. ಇವುಗಳು ಬಹಳ ಪುರಾತನವಾದ "ತೊಡುಗೆ" ಎಂದು ಹೇಳಿದರೂ ಸಹ ತಪ್ಪಾಗಲಾರದು ! ರಾಮಾಯಣದ ಆಯೋಧ್ಯಕಾಂಡದಲ್ಲಿ ಬರುವ "ಪಾದುಕಾ ಪಟ್ಟಾಭಿಷೇಕ"ದ ಪ್ರಸಂಗ ಎಲ್ಲರಿಗೂ ತಿಳಿದಿರುವಂತೆ ಬಹಳ ಪ್ರಮುಖವಾದದ್ದು ! ಭರತ, ಶತ್ರುಘ್ನವನ ರಾಮ ವನವಾಸಕ್ಕೆ ತೆರಳಿದ ನಂತರ, ರಾಜ್ಯ - ರಾಜ್ಯಾಭಾರದಲ್ಲಿ ಆಸಕ್ತಿ ಇರಿಸದೆ, ರಾಮನನ್ನು ಓಲೈಸಿ ಮರಳಿ ಅಯೋಧ್ಯಗೆ ಕರೆತರುವುದಕ್ಕಾಗಿ ಚಿತ್ರಕೂಟಕ್ಕೆ ಪ್ರಯಾಣ ಬೆಳೆಸಿದನು. ಭರತನೇ ಮೊದಲಾದವರೆಲ್ಲರೂ ಅಂಗಲಾಚಿ ಬೇಡಿದರೂ ಒಪ್ಪದ ಶ್ರೀರಾಮನು "ಪಿತೃವಾಕ್ಯ ಪರಿಪಾಲನೆಯೇ" ತನ್ನ ಧರ್ಮವೆಂದು ವಾದ ಮಾಡಿ ಕೊನೆಗೆ ಶ್ರೀರಾಮನ ಪವಿತ್ರವಾದ ಪಾದುಕೆಗಳನ್ನು ಭರತನು ಶಿರದ ಮೇಲೆ ಹೊತ್ತು ಅಯೋಧ್ಯೆಯ ಹೊರವಲಯದಲ್ಲಿದ್ದ "ನಂದಿಗ್ರಾಮ"ದಲ್ಲಿ, ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ, ಶ್ರೀರಾಮನು ನ್ಯಾಸ ರೂಪದಲ್ಲಿರಿಸಿದ್ದ ರಾಜ್ಯ ಭಾರವನ್ನು ನಿರ್ವಹಿಸಿದನು. ಒಬ್ಬ ಆದರ್ಶ ರಾಜ, "ಆದರ್ಶ ತಮ್ಮ"ನ ಕಥೆಯಾಯಿತು. ಇದು ಇಂದಿಗೂ ಆದರ್ಶವಾಗಿಯೇ ಉಳಿದ ಧರ್ಮವೆನಿಸಿದೆ. "ತ್ರೇತಾಯುಗ" ಕಾಲದಲ್ಲಿ ಮರದಿಂದ ಮಾಡಲ್ಪಟ್ಟ ಪಾದುಕೆಗಳನ್ನು ತೊಡುತ್ತಿದ್ದರು. ಪಾದದ ಅಳತೆ ಆಕಾರಕ್ಕೆ ಮಾಡಲ್ಪಟ್ಟ ಮರದ ಹಲಗೆಯ ಮೇಲೆ, 1-1.5 ಇಂಚಿನ ಕಂಬದ ರೀತಿಯ ಮರದ ತುಂಡನ್ನು ಎರಡು ಕಾಲ್ಬೆರಳುಗಳ ನಡುವೆ ಸಿಕ್ಕಿಸಿಕೊಂಡು ನಡೆದಾಡುತ್ತಿದ್ದರು. ಬಹಳ ಅಭ್ಯಾಸಬೇಕು. ಹೆಜ್ಜೆ ಎತ್ತಿಡಬೇಕಾದರೆ ಎಷ್ಟು ಭಾರ ಕಾಲಿಗೆ ! ನಿಜವಾಗಿ ಕಷ್ಟಕರವಾದ ಕೆಲಸವೆಂದೇ ನನ್ನ ಅನಿಸಿಕೆ ! ಪಾಪ ! ಹಿಂದಿನ ಕಾಲದಲ್ಲಿ ಋಷಿ - ಮುನಿಗಳು ಇಷ್ಟೊಂದು ಭಾರದ ಮೆಟ್ಟುಗಳನ್ನು ಧರಿಸಿ ತ್ರಿಲೋಕ ಸಂಚಾರ ಹೇಗೆ ಕೈಗೊಳ್ಳುತ್ತಿದ್ದರೋ ಏನೋ ಆ ಪರಮಾತ್ಮನೇ ಬಲ್ಲ ! ಈಗಲೂ, ಹಲವು ಮಠಾಧಿಪತಿಗಳು, ಸ್ವಾಮೀಜಿಗಳು ಈ ಬಗೆಯ ಪಾದರಕ್ಷೆಗಳನ್ನು ತೊಡುವುದನ್ನು ನಾನು ನೋಡಿದ್ದೇನೆ. ಈಗಿನ ಮಾತು ಬಿಡಿ ! ಇವರೆಲ್ಲರಿಗೂ ವಾಹನಗಳ ಸೌಲಭ್ಯವಿರುವುದರಿಂದ ಹೆಚ್ಚು ಕಾಲ್ನಡಿಗೆಯ ಶ್ರಮ ಪಡಬೇಕಾಗಿಲ್ಲ ! ಅಂದು ಋಷಿಗಳು, ಅಷ್ಟು ದೂರದಲ್ಲಿ ನಡೆದು ಬರುತ್ತಿರುವಾಗಲೇ `ಟಕ್ - ಟಕ್' ಎಂಬ ಅವರ ಮೆಟ್ಟಿನ ಶಬ್ದ ಕೇಳಿ ಬರುತ್ತಿತ್ತು. ಇದೂ ಸಹ ಒಂದು ವಿಧದಲ್ಲಿ ಅನುಕೂಲಕರವಾಗಿತ್ತು ಎನ್ನಬಹುದು ! ಮುನಿವರ್ಯರುಗಳ ಅತಿಥ್ಯಕ್ಕೆ ಸಮಯಾವಕಾಶ ದೊರಕುತ್ತಿತ್ತು. ಅವರು ಅರಮನೆಯ ಒಳಗೆ ಬರುವಾಗಲೇ, ಸಭಾಸದರು ಎದ್ದು ನಿಂತು ನಮಸ್ಕಾರ ಮಾಡಿ, ರಾಜನು ಅರ್ಘಪಾದ್ಯಾದಿಗಳನ್ನು ನೀಡಿ ಸತ್ಕರಿಸಿ, ನಂತರವೇ ನಿಧಾನವಾಗಿ ಉಭಯ ಕುಶಲೋಪರಿ ವಿಚಾರಿಸಿ ತಿಳಿಯಬೇಕಾಗಿತ್ತು. ಈ ಕ್ರಮಬದ್ಧ ಆಚರಣೆಯಲ್ಲಿ ಏರುಪೇರಾದರೋ ದೇವರೇ ಗತಿ ! ವಿಶ್ವಾಮಿತ್ರ, ದೂರ್ವಾಸ ಮುನಿಗಳಿಗಂತೂ ಮೂಗಿನ ತುದಿಯಲ್ಲೇ ಕೋಪ ! ಅವರ ಕೋಪದ ತಾಪ ತಟ್ಟಿದರೆ ಕೆಲಸ ಕೆಟ್ಟಂತೆ ! ಆ ಕೂಡಲೇ ಶಾಪ ಕೊಡುತ್ತಿದ್ದರು ರಾಜನಾದವನಿಗೆ ಮುನಿವರ್ಯನ ಮುನಿಸನ್ನು ಶಾಂತಗೊಳಿಸಿ ಶಾಪ ವಿಮೋಚನೆಯ ಮಾರ್ಗವನ್ನು ಕೋರಿ ಕಂಡುಕೊಳ್ಳುವುದರಲ್ಲಿ ಸಾಕೋ ಸಾಕಾಗಿ ಹೋಗುತ್ತಿತ್ತು ! ಇದು ವೇದ ಉಪನಿಷತ್, ರಾಮಾಯಣ, ಮಹಾಭಾರತ ಭಾಗವತದ ಕಾಲವಾಯಿತು ಎಂದು ಭಾವಿಸೋಣ. ಅಲ್ಲಿಂದಿತ್ತೀಚೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಯ ಗಾಳಿ ಬೀಸಿದಂತೆ ಪಾದರಕ್ಷೆಗಳ ತಯಾರಿಕೆಯಲ್ಲೂ ಅನೇಕ ಮಾಪರ್ಾಡುಗಳಾಗಿವೆ. ಹದ ಮಾಡಿದ ಚರ್ಮ ಅಥವಾ ಚಕ್ಕಳದಿಂದ ಅಷ್ಟೇ ಏಕೆ ಪ್ಲಾಸ್ಟಿಕ್ನಿಂದ ಕೂಡ ಪಾದರಕ್ಷೆಗಳನ್ನು ತಯಾರಿಸುತ್ತಾರೆ. ಎಷ್ಟೊಂದು ವಿನ್ಯಾಸ, ವೈವಿಧ್ಯತೆ ! ಕೆಲವು ಜೋಡಿನ ಅಟ್ಟಿ (ಖಠಟಜ) ನೆಲಸಮವಾಗಿದ್ದು ಪಾದಗಳಿಗೆ ಅಂಟಿಕೊಂಡಂತೆ ಅಡ್ಡಾಡಲು ಅನುಕೂಲವಾಗಿರುತ್ತದೆ. ಕೆಲವು ಹಿಮ್ಮಡಿಗಳು ನೆಲದಿಂದ 2-3 ಇಂಚು ಎತ್ತರಕ್ಕಿದ್ದು ಧರಿಸುವವಳ, ಎತ್ತರ ಹೆಚ್ಚಿಸುವುದೇ ಅಲ್ಲದೆ ಅವಳ ನಡಿಗೆಗೆ ಒಂದು ರೀತಿಯ ಸೊಬಗು, ಲಾಸ್ಯ, ಆಕರ್ಷಣೆ ಉಂಟು ಮಾಡುತ್ತದೆ. ಹಿಂದೆ ಕವಿಗಳು ಹೆಣ್ಣಿನ ನಡಿಗೆಗೆ ಮಾರುಹೋಗಿ ಅವಳನ್ನು `ಗಜಗಮನೆ', `ಹಂಸ ಗಮನೆ' ಎಂಬ ಪದಾಲಂಕಾರಗಳನ್ನು ಬಳಸಿ ವರ್ಣನೆ ಮಾಡುತ್ತಿದ್ದರು. ಇವೆಲ್ಲಾ ಈಗಿನ ಕಾಲಕ್ಕೆ ಹಳೆಯ ಹೋಲಿಕೆಗಳೆನಿಸಿದರೆ ಆಶ್ಚರ್ಯವೇನಿಲ್ಲ ! ವಿದೇಶಿಯರು ನಮ್ಮ ದೇಶವನ್ನು ನಾವೇ ಆಳಲು ಬಿಟ್ಟು ಹೋಗಿ ಅರ್ಧಶತಮಾನವಾದರೂ ಅವರ ಕೆಲವು ನಡೆವಳಿಕೆ ರೀತಿ - ನೀತಿ, ಉಡುಗೆ ತೊಡುಗೆಗಳಿಗೆ ನಾವು ಇನ್ನೂ ಅಂಟಿಕೊಂಡಿಯೇ ಇದ್ದೇವೆ. ಅವರ "ಸೂಟು - ಬೂಟು - ಟೈ ಸಂಸ್ಕೃತಿ" ನಮ್ಮ ದೇಶದ ಹವಾಮಾನಕ್ಕೆ ಹೊಂದುವುದೇ ? ನಮ್ಮ ಚಪ್ಪಲಿಗಳು ಧರಿಸಲು ಹಾಗೂ ಕಳಚಲು ಕಷ್ಟವೇ ಇಲ್ಲ. ಅಲ್ಲವೇ ? ದೇವಸ್ಥಾನಗಳಿಗೆ, ಮದುವೆ-ಮುಂಜಿ, ಪೂಜೆ - ಪುನಸ್ಕಾರಗಳಿಗೆ ಹೋದಾಗ ನಾವು ಪಾದರಕ್ಷೆಗಳನ್ನು ಹೊರಗಡೆಯೇ ಬಿಟ್ಟು ಸಭಾಂಗಣಗಳಿಗೆ ಪ್ರವೇಶ ಮಾಡುವುದು ಪರಂಪರಾಗತವಾಗಿ ಬಂದಿರುವ ಪದ್ಧತಿ ಎಂದು ನಮ್ಮೆಲ್ಲರಿಗೂ ತಿಳಿದ ವಿಷಯವೇ ಸರಿ ! ಇತ್ತೀಚಿಗೆ ದೇವಸ್ಥಾನಗಳ ಹೊರಗಡೆ ಭಕ್ತಾದಿಗಳು ಕಳಚಿ ಬಿಟ್ಟಿರುವ ಜೋಡುಗಳನ್ನು ನೋಡಿಕೊಳ್ಳಲು, ಅಂದರೆ ಪಾದರಕ್ಷೆಗಳು ಕಳೆದು ಹೋಗದಂತೆ ರಕ್ಷಣೆ ಮಾಡಲು ವ್ಯವಸ್ಥೆ ಮಾಡಿರುತ್ತಾರೆ, ಆ ಸೇವೆಗಾಗಿ ನಾವು ಸ್ವಲ್ಪ ಹಣ ನೀಡಬೇಕಷ್ಟೇ. ಈ ಏಪರ್ಾಡು ಜಾರಿಗೆ ಬರುವ ಮೊದಲು, ನಮ್ಮ - ನಮ್ಮ ಜೋಡುಗಳ ಜವಾಬ್ದಾರಿ ನಾವೇ ಸ್ವತಃ ತೆಗೆದುಕೊಳ್ಳುತ್ತಿದ್ದ ಕಾಲದಲ್ಲಿ, ಮನ ನೆಮ್ಮದಿ ಅರಸಿ ದೇವರ ಸನ್ನಿಧಿಗೆ ಬಂದಾಗಲೂ ನಮ್ಮ ಮನ ಭಗವಂತನಲ್ಲಿ ನೆಲೆಸುವ ಬದಲಾಗಿ, ನಮ್ಮ ದೃಷ್ಟಿ ಹೊರಗೆ ಕಳಚಿಬಿಟ್ಟಿರುವ ಕಾಲಿನ ಜೋಡುಗಳ ಮೇಲೆ ಜಾರಿ ಹೋಗುತ್ತಿದ್ದ ಅನುಭವ ನಮಗೆ, ನಿಮಗೆ, ಏನು ಎಲ್ಲರಿಗೂ ಒಮ್ಮೆಯಾದರೂ ಆಗಿದೆ. ಆದರೆ ಈಗ ಸಧ್ಯ ನೆಮ್ಮದಿ ಸಿಕ್ಕಿದೆ. ಮದುವೆ - ಮುಂಜಿ, ಮಂಗಳ ಕಾರ್ಯಕ್ಕೆ ಹೋದಾಗ ಈ ಮೊದಲು, ಈ ರೀತಿಯ ಅನುಕೂಲ ಲಭ್ಯವಿಲ್ಲದೆ ಪಾದರಕ್ಷೆಗಳನ್ನು ಕಳೆದುಕೊಂಡು ಪರದಾಡಿದ್ದು ನನಗೇ ಎಷ್ಟೋ ಬಾರಿ ಅನುಭವಕ್ಕೆ ಬಂದಿದೆ. ಪಾದರಕ್ಷೆಗಳು ಪಾದಗಳನ್ನು ಬಿಟ್ಟು ಹೋದ ಮೇಲೆ ಜೇಬಿನಿಂದ ಹಣ ಹೊರಟು ಹೋಗುವುದರಲ್ಲಿ ಎಷ್ಟು ಮಹಾ ಸಮಯ ಆಗುತ್ತದೆ ? ಯಾಕೆಂದರೆ ಇಂತಹ ಸನ್ನಿವೇಶವನ್ನು "ತುತರ್ುಪರಿಸ್ಥಿತಿ" ಎಂದೇ ವಣರ್ಿಸಿ ಹೇಳಬಹುದು. ಇತ್ತೀಚಿಗೆ ಮದುವೆ ಮನೆಗಳಿಗೆ ಹೋದವರು ತಮ್ಮ ಎರಡು ಕಾಲಿನ ಚಪ್ಪಲಿಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಿಟ್ಟು, ಚಪ್ಪಲಿ ಚೋರರನ್ನು ಗಲಿಬಿಲಿಗೀಡು ಮಾಡಿದ್ದಾರೆಂದು ಕೇಳಿದ್ದೇನೆ. ಈ ಉಪಾಯ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆಯೋ ಯಾರಿಗೆ ಗೊತ್ತು ? ಮರೆವು ಕಾಯಿಲೆ ಇದ್ದದ್ದಾದರೆ ಮತ್ತಷ್ಟು ಮನಃಕ್ಲೇಶ. ಆ ಗಲಾಟೆಗದ್ದಲದಲ್ಲಿ ಚಪ್ಪಲಿ ಇರಿಸಿದ ಜಾಗಗಳನ್ನು ಮರೆತರೆ ಏನು ಗತಿ ! ಬಹಳ ಬಾರಿ ಚಪ್ಪಲಿ ಕಳೆದುಕೊಂಡವರ ಸೋತ ಮುಖ ಪೆಚ್ಚು ಮುಖ ನೋಡಿ ಅವರ ಸಮಾಧಾನಕ್ಕಾಗಿ ಹಲವರು ಹೇಳುವುದುಂಟು. "ಚಿಂತೆ ಮಾಡ್ಬೇಡ, ನಿನ್ನ ಮೇಲಿನ ಪೀಡೆ ಪರಿಹಾರವಾಯ್ತು" (ಗ್ರಹಚಾರ), ಪಾದರಕ್ಷೆಗಳಂತೂ ಹೋಯ್ತು. ಅದರಲ್ಲಿದ್ದ (?) ಪೀಡೆ, ಪರಿಹಾರವಾಯ್ತೋ ಇಲ್ಲವೋ ಯಾರಿಗೆ ಗೊತ್ತು ? ಪಾದರಕ್ಷೆಗಳನ್ನು ಧರಿಸದೆಯೇ ಪಟ್ಟಣಗಳ ರಸ್ತೆಗಳಲ್ಲಿ ಪಾದಚಾರಿಗಳಾಗಿ ನಡೆದಾಡಲು ಸಾಧ್ಯವೇ ? ತಂಬಾಕು - ತಾಂಬೂಲ ಮಿಶ್ರಿತ ಉಗುಳಿನ ಸಿಂಪಣೆ ರಸ್ತೆಗಳಲ್ಲೆಲ್ಲಾ ಆಗಿರುವಾಗ, ಅದರಲ್ಲಿ ವೈರಸ್, ಬ್ಯಾಕ್ಟೀರಿಯಾ ಬೀಡು ಬಿಟ್ಟಿರುವಾಗ ಚಪ್ಪಲಿ, ಇಲ್ಲದೆ ಬರೀಕಾಲಿನಲ್ಲಿ ನಡೆಯಲು ಮನಸ್ಸಾಗುವುದೇ ? ದೇಹಾರೋಗ್ಯ ಏನಾಗಬಹುದು ? ಮಳೆಗಾಲದ ನಂತರ ನಮ್ಮ ರಸ್ತೆಗಳಲ್ಲಿ ಕಂಡು ಬರುವ, ಕೊಳಚೆ ನೀರು ತುಂಬಿರುವ ಹಳ್ಳ - ಕೊಳ್ಳಗಳು ಎಷ್ಟೊಂದು ! ಟಾರು ಕೊಚ್ಚಿಹೋಗಿ ರಸ್ತೆಗಳಲ್ಲಿ ಉಳಿದ ಕಲ್ಲುಗಳ ಮೇಲೆ ಕಾಲಿಡಲು ಆಗುವುದೇ ? ಒಂದೇ - ಎರಡೇ, ಹೆಜ್ಜೆ - ಹೆಜ್ಜೆಗೂ ಅಪಾಯಗಳು ಅಡಗಿಕೊಂಡಿರುವ ರಸ್ತೆಗಳಲ್ಲಿ ಬರೀ ಕಾಲಿನಲ್ಲಿ, ಚಪ್ಪಲಿ ರಹಿತವಾಗಿ ಓಡಾಡಲು ಸಾಧ್ಯವೇ ಇಲ್ಲ. ಪಟ್ಟಣಗಳಾಗಲೀ, ಹಳ್ಳಿಯಾಗಲೀ ಪಾದಗಳಿಗೆ ಪಾದರಕ್ಷೆಗಳ ರಕ್ಷಣೆ ಅತ್ಯವಶ್ಯಕ ! ಇತ್ತೀಚೆಗೆ, ನಮ್ಮ ಕನ್ನಡ ಸಂಘದಲ್ಲಿ ಜರುಗಿದ ಒಂದು ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೂರದ (ಮುಂಬಯಿ) "ಥಾನೆ"ಯಿಂದ ಒಬ್ಬ ಆಹ್ವಾನಿತರು ಬಂದಿದ್ದರು. ಸಭೆ ಮುಗಿದ ಮೇಲೆ ಅವರು ಅವಸರದಲ್ಲಿ ಒಂದು ಕಾಲಿಗೆ ಇನ್ನೊಬ್ಬರ ಪಾದರಕ್ಷೆ ಧರಿಸಿ ಮನೆ ಮುಟ್ಟಿಯೂ ಆಯಿತು. ಕಾಲಿನಿಂದ ಕಳಚುವಾಗ ನೋಡಿ ಹೌಹಾರಿದರು ! ಇದೇನು ? ಒಂದು ತನ್ನದೇ ಹೊಸ ಚಪ್ಪಲಿ, ಮತ್ತೊಂದು ಕಾಲಿಗೆ ಬೇರೆ ಬಣ್ಣದ, ಬೇರೆ ವಿನ್ಯಾಸದ ಪಾದರಕ್ಷೆ ! ಈ ಅಚಾತುರ್ಯ ಹೇಗಾಯಿತು ? ಚಪ್ಪಲಿಗಳನ್ನು ಧರಿಸುವಾಗ ತಲೆ ಬಗ್ಗಿ ಪಾದಗಳ ಕಡೆ ಗಮನಹರಿಸಲು ಮರೆತೆನೆ ? ಒಂದು ಜೋಡನ್ನು ತೊಡುವಾಗ ಬಿಗಿಯಾಗಿದೆಯೆಂದೆನಿಸಿದರೂ ಒಂದೆರಡು ಗಂಟೆಗಳ ಕಾಲ, ಒಂದೆಡೆಯಲ್ಲೇ ಕುಳಿತಿದ್ದೆನಾದ್ದರಿಂದ ಕಾಲು ಭಾರವಾಗಿ ಬಿಗಿಯಾಗಿರಬಹುದೆಂದು ಊಹೆ ಮಾಡಿದ್ದು ತಪ್ಪಾಯಿತೇ ? ಸಮಾರಂಭ ನೋಡಿ ನಲಿದು, ಮನೆಗೆ ಹೋದ ಕೂಡಲೇ ತಮ್ಮ ಸಮಸ್ಯೆಯನ್ನು ನನ್ನಲ್ಲಿ ಹೇಳಿಕೊಂಡಿದುದೇ ಈ ಲೇಖನಕ್ಕೆ ಸ್ಫೂತರ್ಿಯಾಯಿತು. ಅವರು ಧರಿಸಿದ ಮತ್ತೊಬ್ಬರ ಜೋಡನ್ನು ಅದರ ಒಡತಿಗೆ ಹೇಗೆ ಹಿಂತಿರುಗಿಸುವುದು, ಎಂಬುದೇ ಇಲ್ಲಿ ದೊಡ್ಡ ಸಮಸ್ಯೆ ! ಆ ಮತ್ತೊಬ್ಬರು ಸಹ ತಮ್ಮ ಒಂದು ಕಾಲಿಗೆ ತನ್ನ ಸ್ವಂತ ಚಪ್ಪಲಿ ಕಾಣದೆ ಥಾನೆ ಯವರ ಒಂದು ಕಾಲಿನ ಚಪ್ಪಲಿ ಧರಿಸಿ ಮನೆಗೆ ಹೋದರೆ ? ಅಥವಾ ಮತ್ತೊಂದು ಕಾಲಿನ ಚಪ್ಪಲಿ ಹುಡುಕಿ, ಸಿಗದೆ ಒಂದೇ ಒಂದು ಚಪ್ಪಲಿ ಹಾಕಿಕೊಂಡು ಹೋದರೆ ? ಇಲ್ಲ, ಅದು ಸಾಧ್ಯವೇ ಇಲ್ಲ ! ಬಿಡಿ, ಆ ಒಂದು ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಬರಿಗಾಲಿನಲ್ಲಿ ಮನೆಗೆ ಹೋದರೆ ? ಪಾಪ ! ಅವರಿಗೇನು ಗೊತ್ತು. ತಮ್ಮ ಮತ್ತೊಂದು ಕಾಲಿನ ಚಪ್ಪಲಿ, ಇನ್ನೊಬ್ಬರ ಕಾಲಿಗೆ ಸೇರಿ, `ಥಾನೆ'ಗೆ ತಲುಪಿದೆ ಎಂಬ ವಿಷಯ. "ಜೋಡು"ಗಳ ಜೋಡಿ ಅವರದವರಿಗೆ ದೊರೆಯಿತೆ ? ಸಮಸ್ಯೆಗಳು ಸುಲಲಿತವಗಿ ಬಗೆ ಹರಿದವೆ ? ಪಾದರಕ್ಷೆಗಳು ಅದಲು - ಬದಲು ಆದರೆ ಹೀಗೆಯೇ ಆಗುವುದಲ್ಲವೇ ? `ಅದಲು - ಬದಲು' ಹತ್ತಾರು ಬಾರಿ, ಬೇಗ-ಬೇಗ ಪುನರಾವೃತ್ತಿ ಮಾಡುವಾಗಲೇ ನಾಲಿಗೆ ತೊದಲಿ ಬದಲು, ಅದಲಾಗಬಹುದು. ಅಲ್ಲವೇ ಪ್ರಯತ್ನಿಸಿ, ಪರಿಹಾರ ಸೂಚಿಸಿ ಎಂದು ಕೋರುವ ವನಜಾರಾಜನ್.(ಸ್ನೇಹ ಸಂಬಂಧ - ಕನರ್ಾಟಕ ಸಂಘದ ಮಾಸಪತ್ರಿಕೆ - ಜನವರಿ 2001)

ಕಡಲ ತೀರದ ಭಾರ್ಗವ,
ಡಾ ಶಿವರಾಮ ಕಾರಂತ(ಶ್ರದ್ಧಾಂಜಲಿ)
ಬಾಳ್ವೆಯೇ ಬೆಳಕೆಂದು, ಅರ್ಥಪೂರ್ಣವಾಗಿ ತುಂಬು ಬಾಳ್ವೆ ಬಾಳಿದ ಕೋಟ ಶಿವರಾಮ ಕಾರಂತರು, ಇಪ್ಪತ್ತನೆಯ ಶತಮಾನ ಕಂಡ ಒಬ್ಬ ಮಹಾನ್ ಕನ್ನಡಿಗ. ಅವರ ವ್ಯಕ್ತಿತ್ವ ಬಣ್ಣನೆಗೆ ನಿಲುಕಬಲ್ಲದೆ ? "ಆ ಆಕಾಶಕ್ಕೆ ಏಣಿ ಹಾಕಲು ಸಾಧ್ಯವೇ ?" ಅವರ ವ್ಯಕ್ತಿತ್ವ ಸಾಧನೆಗಳ ಅಗಾಧತೆ - ಆಳ ವಿಸ್ತಾರ ಅಪಾರವಾಗಿರುವುದರಿಂದ, ಕೆಲವೇ ಮಾತುಗಳ ತೆಕ್ಕೆಗೆ ಸಿಲುಕಲ ಸಾಧ್ಯ ! ನೀಳ ದೇಹದ ವ್ಯಕ್ತಿಯ ನೇರ ನುಡಿ, ಯಾವುದರ ಬಗ್ಗೆಯೂ ಅನ್ನಿಸಿದ್ದನ್ನು ಅನ್ನಿಸಿದಂತೆ ಹೇಳಬಲ್ಲ ಎದೆಗಾರಿಕೆ, ಸಿಂಹದಂತಹ ಗಾಂಭೀರ್ಯ, ಅನ್ವೇಷಣ ಪ್ರವೃತ್ತಿ, ವೈಚಾರಿಕ ದೃಷ್ಟಿಕೋನ, ಪ್ರತಿಯೊಂದು ನಂಬಿಕೆಯ ಬುಡವನ್ನು ಹಿಡಿದು ಅಲ್ಲಾಡಿಸಿ, ತಳ ಶೋಧಿಸುವ ಛಲ ಅವರ ಪಾರದರ್ಶಕ ವ್ಯಕ್ತಿತ್ವ - ಒಂದೇ ಎರಡೇ, ಅವರ ಬಹುಮುಖಿ ಪ್ರತಿಭೆಯಲ್ಲಿ ಇವುಗಳ ಪ್ರಭೆ ಪ್ರಕಟವಾಗುತ್ತದೆ. ಅದಕ್ಕಗಿಯೇ ಏನೋ ಅವರೊಬ್ಬ ವ್ಯಕ್ತಿಯಲ್ಲಿ "ಒಂದು ಶಕ್ತಿ" "ಒಂದು ಸಂಸ್ಥೆ" ಅಡಗಿದೆ ಎಂದರೆ ಸರಿಯಾದೀತು ! "ಆಡು ಮುಟ್ಟದ ಸೊಪ್ಪಿಲ್ಲ" ಎಂಬ ನಾಣ್ನುಡಿಯಂತೆ ಕಲೆ, ಸಾಹಿತ್ಯ ಪತ್ರಿಕೋದ್ಯಮ, ಸಂಗೀತ, ಯಕ್ಷಗಾನ, ಶಿಕ್ಷಣ, ರಾಷ್ಟ್ರ ಭಕ್ತಿ, ಅಧ್ಯಾತ್ಮ, ವಾಸ್ತು, ಚಲನಚಿತ್ರ, ಪರಿಸರ, ಸಮಾಜ ಸುಧಾರಣೆ - ಇವೆಲ್ಲವನ್ನು ಸ್ವಂತೀಕರಿಸಿಕೊಂಡು ಬೆಳೆದ ಬರವಣಿಗೆಯ ತ್ರಿವಿಕ್ರಮ ಸ್ವರೂಪ ಅವರದು. ಬರಹದ ಜೊತೆಗೆ ಮುದ್ರಣ, ಪ್ರಕಾಶನ - ಯಾವುದರಿಂದಲೂ ತಣಿಯದ ತಳಮಳ, ಹೊಸ ಹೊಸ ಆಯಾಮಗಳನ್ನು ತೆರೆಯುತ್ತ, ದಾಂಗುಡಿಯಿಡುವ ಜೀವನ ಧರ್ಮ ! ಕಾರಂತರು ತಮ್ಮನ್ನು ತೊಡಗಿಸಿಕೊಳ್ಳದ ಕ್ಷೇತ್ರವೊಂದೂ ಇಲ್ಲ. ತಮ್ಮ ಬಾಳನ್ನು ಸಂಪದ್ಭರಿತವಾಗಿ ಮಾಡಿಕೊಳ್ಳಲು ಅವರು ಬಳಸಿಕೊಳ್ಳದ ಮಾಧ್ಯಮವೇ ಇಲ್ಲ. ಕಾರಂತರು ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದಾರೆ. ಅವರಿಗೆ ಜ್ಞಾನ ಪೀಠ ಪ್ರಶಸ್ತಿಯನ್ನು ತಂದು ಕೊಟ್ಟಿದ್ದು (1978) ಅವರ "ಮೂಕಜ್ಜಿಯ ಕನಸುಗಳು" ಆದರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದು ಕಾದಂಬರಿ ಅಲ್ಲ. "ಯಕ್ಷಗಾನ ಬಯಲಾಟ"ಕ್ಕಾಗಿ. ಸುದೀರ್ಘ ಕಾದಂಬರಿ ಮಾಲೆಯಲ್ಲಿನ ಅಣಿ ಮುತ್ತುಗಳು ಅನೇಕವಿವೆ. ("ಮರಳಿ ಮಣ್ಣಿಗೆ", "ಬೆಟ್ಟದ ಜೀವ", "ಕುಡಿಯದರ ಕೂಸು", "ಧರ್ಮರಾಯನ ಸಂಸಾರ", "ಚೋಮನದುಡಿ" ಇತ್ಯಾದಿ) ಕಾರಂತರು ಬೇರೇನೂ ಮಾಡದೇ ಬರೀ ಕಾದಂಬರಿಗಳನ್ನು ಬರೆದಿದ್ದರೂ ಅವರ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತಿತ್ತು. ಬದುಕಿನ ಆಳ, ಹರವು, ಏರು - ತಗ್ಗು, ವಿವಿಧ ರಂಗುಗಳನ್ನು ಕಾಣಲು ದೇಶದಲ್ಲೆಲ್ಲಾ ಅಲೆದಾಡಿದರು. ಜಗತ್ತನ್ನೆಲ್ಲಾ ಸುತ್ತಾಡಿದರು. ಜೀವನವನ್ನು ಹತ್ತಿರದಿಂದಲೇ ವೀಕ್ಷಿಸಲು ತವಕ. ಅವರು "ನಡೆದಾಡುವ ವಿಶ್ವಕೋಶವೇ ಆಗಿದ್ದರು. ಅವರು ನಿರಂತರ ಪರಿವ್ರಾಜಕ ಕಲೆಯನ್ನೇ ಕನಸುಗಳ ಜೇನುಗೂಡಾಗಿ ಪರಿವತರ್ಿಸಿಕೊಂಡು ತೊಳಲಾಡಿದ ಕಾರಂತರಂಥವರು ಇನ್ನೊಬ್ಬರಿರುವುದು ಸಾಧ್ಯವಿಲ್ಲ. ಅವರ ಭಾಷಣ ಕೇಳುವವರಿಗೆ ರಸದೌತಣದಂತೆ ! ವಿಷಯವನ್ನು ಎಳೆ - ಎಳೆಯಾಗಿ ಬಿಡಿಸಿ ಮುಂದಿಡುವ ವಸ್ತುನಿಷ್ಠೆ, ಮಧ್ಯೆ - ಮಧ್ಯೆ ಇಣುಕಿ ನೋಡುವ ನವಿರು ಹಾಸ್ಯ ಚಟಾಕಿಗಳು. ಕೇಳುವವರನ್ನು ಮಂತ್ರ ಮುಗ್ಧರನ್ನಾಗಿ ಮಾರ್ಪಡಿಸುತ್ತಿತ್ತು. ಮಕ್ಕಳಿಗಾಗಿ ಅವರು ಮಾಡಿದ ಕೆಲಸ ಮಹತ್ತರವಾದುದು. ಶಿಕ್ಷಣ ವ್ಯವಸ್ಥೆಯ ಬೇರುಗಳನ್ನು ಅಲ್ಲಾಡಿಸುವಂಥ ಆಲೋಚನೆಗಳನ್ನು ಆವಾಹಿಸಿಕೊಂಡು `ಬಾಲವನ' ದಂಥ "ಬೀಜ ರೂಪಿ" ಶಾಂತಿನಿಕೇತನವನ್ನು ಸ್ಥಾಪಿಸಿ ನೂರಾರು ಮಕ್ಕಳ `ನಾಳೆಯ' ಕನಸನ್ನು ರೂಪಿಸಿದರು. `ಬಾಲ ಪ್ರಪಂಚ ವಿಜ್ಞಾನ', `ಪ್ರಪಂಚ' ಜ್ಞಾನಕೋಶ, ವಿಜ್ಞಾನ ಕೋಶಗಳನ್ನು ಪ್ರಕಟಿಸಿ ಕನ್ನಡದ ಕಂದಮ್ಮಗಳನ್ನು ಕಂದಾಚಾರದ ಆಲೋಚನೆಗಳಿಂದ ಬಿಡುಗಡೆ ಮಾಡಿ ವೈಜ್ಞಾನಿಕ ಮಾಹಿತಿ ಮತ್ತು ವೈಜ್ಞಾನಿಕ ಮನೋಭಾವದ ಮುಕ್ತ ಮಾರ್ಗದ ಕಡೆಗೆ ಕರೆದೊಯ್ಯಲು ಹೆಣಗಿದರು. ಯಕ್ಷಗಾನದ ನಟ, ನಿದರ್ೇಶಕರಾಗಿ, ಗೆಜ್ಜೆ ಕಟ್ಟಿಕೊಂಡು, ವಿಶ್ವದಾದ್ಯಂತ ಪ್ರದಶರ್ಿಸಿ ("ಯಕ್ಷರಂಗ" ಎಂಬ ಪ್ರಯೋಗ ಮಾಡಿ, ಯಕ್ಷಗಾನವನ್ನು 3 ಗಂಟೆಗೆ ಇಳಿಸಿದ್ದರು) ಜಯಭೇರಿ ಹೊಡೆದದ್ದಲ್ಲದೆ, ಯಕ್ಷಗಾನ ಅಧ್ಯಯನಕ್ಕೆ ಅಮೂಲ್ಯವಾದ ಗ್ರಂಥವಾದ "ಯಕ್ಷಗಾನ ಬಯಲಾಟ" ವನ್ನು ಬರೆದು ಸ್ವಂತ ಖಚರ್ಿನಲ್ಲಿ ಪ್ರಕಟ ಮಾಡಿದರು. ಪ್ರಜ್ಞಾಪೂರ್ಣ ಪ್ರವಾಸಿಗನ ಸಾಂಸ್ಕೃತಿಕ ಆಸಕ್ತಿಗಳು ಎಂಥವಾಗಿರಬೇಕು ಎಂಬುದಕ್ಕೆ ಮಾದರಿಯಾಗುವಂತಹ, `ಅಬೂವಿನಿಂದ ಒರಾಮಕ್ಕೆ', `ಅಪೂರ್ವ ಪಶ್ಚಿಮ', `ಪೂರ್ವದಿಂದ ಅತ್ಯಪೂರ್ವಕ್ಕೆ ಅರನಿಕರಲ್ಲಿ' ಮುಂತಾದ ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು. ನಿಸರ್ಗ ಸಮಾಜ ಎರಡರ ಬಗೆಗೂ, ಅವರಿಗೆ ಸಮಾನ ತುಡಿತ ! ಪರಿಸರದ ಅಧ್ಯಯನ ಕೃತಿಗಳನ್ನು ಅನುವಾದಿಸಿದ್ದಾರೆ. ಈ ಪ್ರಚಂಡ ದಶಾವತಾರದ ಆಟದಂತಹ ಬದುಕನ್ನು, ಅದರ ಜೊತೆಗೆ ಅದೇ ಬದುಕು ವೈಯಕ್ತಿಕವಾಗಿ ನೀಡಿದ ನೂರಾರು ನಲಿವು - ಸಂಕಟ - ಸುಖಗಳನ್ನು ದಾಖಲಿಸುವ ಪ್ರಯತ್ನ. ಅವರ ಆತ್ಮ ಚರಿತ್ರೆಗಳಾದ `ಹುಚ್ಚು ಮನಸ್ಸಿನ ಹತ್ತು ಮುಖಗಳು' `ಸ್ಮೃತಿ ಪಟಲದಿಂದ' ಕೃತಿಗಳಲ್ಲಿ ಕಂಡು ಬರುತ್ತದೆ. ಒಬ್ಬ ವ್ಯಕ್ತಿ ಒಂದೇ ಒಂದು ಜೀವಮಾನದಲ್ಲಿ ತಮ್ಮ ವ್ಯಕ್ತಿತ್ವವನ್ನು ಅಗಾಧ ಗಾತ್ರಕ್ಕೆ ಹಿಗ್ಗಿಸಿಕೊಂಡು ಬಾಳಿದ ಶಿವರಾಮ ಕಾರಂತರೊಡನೆ ಹೋಲಿಸಬಲ್ಲಂಥ ಇನ್ನೊಂದು ವ್ಯಕ್ತಿ ನಾವು ಕನ್ನಡಿಗರು ಎಂದು ನೋಡುವೆವೋ ? ನಮ್ಮ ಕನ್ನಡಿಗರ ಸೌಭಾಗ್ಯವೋ ಎಂಬಂತೆ "ಕಡಲತಡಿಯ ಭಾರ್ಗವ" ಶಿವರಾಮ ಕಾರಂತರು ಕೊಟ್ಟು ಬಿಟ್ಟಿರುವ `ಕಡಲನಂತಹ' ಅರಿವಿನ ಜ್ಞಾನದ ಶಕ್ತಿ ಅಡಗಿದೆ. ಅದರ ತಳ ಸೋಸಿ, ತೆಗೆಯೋಣ. ಕಡಲನ್ನು ಪ್ರೀತಿಸೋಣ ! ಕಾರಂತರನ್ನು ಪ್ರೀತಿಯಿಂದ ನೆನಪು ಮಾಡಿಕೊಳ್ಳೋಣ ! ಅವರು ಇನ್ನಿಲ್ಲ ಅವರ ನೆನಪು ಅಜರಾಮರ !(ಕನ್ನಡ ಸಂಕಲನ - ಜನವರಿ 1998)

ಈರುಳ್ಳಿಯ ಕಥೆ - ವ್ಯಥೆ(ಹರಟೆ)
ಸಸ್ಯ ವಿಜ್ಞಾನದಲ್ಲಿ (Botony) ಈರುಳ್ಳಿಯನ್ನು "ಬಿಳಿ ಬಣ್ಣದ ಸಣ್ಣ - ಸಣ್ಣ ಹೂವುಗಳಿಂದ ಕೂಡಿದ ವತರ್ುಲಾಕಾರದ, ಮೆದುತಿರುಳಿರುವ, ನಡುವೆ ಪೊಳ್ಳಾಗಿರುವ (Hollow) ರೇಖಾತ್ಮಕ ಎಲೆಗಳಿರುವ, ಗಡ್ಡೆಯಾಕಾರದ" ಸಸ್ಯವೆಂದು ವಣರ್ಿಸಲಾಗಿದೆ. "ಈರುಳ್ಳಿ" ಎಂದಾದರೂ ಹೆಸರಿಸಿರಿ, ಅಥವಾ `ನೀರುಳ್ಳಿ' ಎಂದಾದರೂ ನೆನಪು ಮಾಡಿಕೊಂಡರೂ ಸರಿ, ಅಬಾಲವೃದ್ಧರಿಗೂ ತಿಳಿದ ಒಂದು ವಿಷಯವೆಂದರೆ, ಅದನ್ನು ಹೆಚ್ಚುವಾಗ ಅಥವಾ ಕತ್ತರಿಸಿದಾಗ ಕಣ್ಣೀರು ಬರುವುದು. ಈಗಿನ ವಿಷಯಬಿಡಿ "ಈರುಳ್ಳಿ"ಯನ್ನು ನೋಡುವಾಗಲೇ, ಅದರ ಬೆಲೆ ಕೇಳುವಾಗಲೇ ಕಣ್ಣೀರು ಧಾರೆ - ಧಾರೆಯಾಗಿ ಹರಿಯುವುದು. ಈರುಳ್ಳಿ - ಅದರ ಗುಂಪಿಗೆ ಸೇರಿದ ಬೆಳ್ಳುಳ್ಳಿ - ಅದರ ವಾಸನೆ, ರುಚಿ ಇಂದ್ರಿಯಗಳಿಗೆ ಒಂದು ವಿಶೇಷ ಅನುಭವ ನೀಡುವುದಂತೂ ಸತ್ಯ. ಬಿಳಿ ಈರುಳ್ಳಿಗಿಂತಲೂ, ಕೆಂಪು (ನೀಲಿ ಬಣ್ಣ ಬೆರೆತ) ಈರುಳ್ಳಿಯಲ್ಲಿ ಹೆಚ್ಚು ಖಾರ / ಘಾಟು ಇರುತ್ತದೆಯಾದ್ದರಿಂದ ಅಡಿಗೆಯಲ್ಲಿ ಉಪಯೋಗಿಸುವುದು ಹೆಚ್ಚು. ಹಿಂದೆ, ಅಂದರೆ ನಮ್ಮ ಅಜ್ಜಿ - ಮುತ್ತಜ್ಜಿಕಾಲದಲ್ಲಿ, "ಈರುಳ್ಳಿ" ಅಂದಕೂಡಲೇ ಮಡಿವಂತರು ಮೂಗೆಳೆಯುತ್ತಿದ್ದರು. ಹಬ್ಬ - ಹರಿದಿನಗಳಲ್ಲಿ, ವ್ರತದ ದಿನಗಳಲ್ಲಿ ಈರುಳ್ಳಿಯ ಬಳಕೆ ಸಂಪೂರ್ಣ ವರ್ಜ ! ಎಂದಾದರೂ ಒಂದು ಭಾನುವಾರವೋ, ಇಲ್ಲ ರಜಾದಿನಗಳಲ್ಲೋ ಈರುಳ್ಳಿ - ಆಲೂಗಡ್ಡೆ ಕಡಲೇಕಾಳು ಹಾಕಿ ಸಾಂಬಾರು ಮಾಡಿದರೆ, ಅಕ್ಕ - ಪಕ್ಕದವರಿಗೆಲ್ಲಾ ಘಮ - ಘಮ ವಾಸನೆ ಮೂಗಿಗೆ ಬಡಿಯುತ್ತಿತ್ತು. ಅವರ ನಾಲಿಗೆಯಲ್ಲಿ ನೀರೂರುತ್ತಿತ್ತು ಎಂದರೆ ಆಶ್ಚರ್ಯವೇನು ? ಅದರೊಡನೆ ಸಂಡಿಗೆ - ಹಪ್ಪಳವಿದ್ದರಂತೂ, ಆಹಾ ! ಹಬ್ಬದೂಟದಂತಿತ್ತು. ಅಡಿಗೆ ಮನೆಯಲ್ಲಿ ಒಂದೆಡೆ ಅಡಗಿ, ಬುಟ್ಟಿಯಲ್ಲಿ ಬೆಚ್ಚಗೆ ಕುಳಿತಿರುತ್ತಿದ್ದ `ಈರುಳ್ಳಿ' ಹೊರಗೆ ಬರಲು ಆಗೊಮ್ಮೆ - ಈಗೊಮ್ಮೆ ಅವಕಾಶವಾಗುತ್ತಿತ್ತು. ತೊಂಬತ್ತರ ದಶಕದ ಪ್ರಾರಂಭದೊಡನೆ `ಈರುಳ್ಳಿ' ಇತರ ಕಾಯಿ - ಪಲ್ಲೆಗಳೊಡನೆ ಸರಿ - ಸಮಾನ ಹಕ್ಕುಗಳನ್ನು ಹಾಗೂ ಮಹತ್ವವನ್ನು ಪಡೆಯಿತು. ನಾಯಿಕೊಡೆಗಳಂತೆ ನಾಲ್ಕು ರಸ್ತೆ ಸೇರಿದ ಕಡೆಗಳೆಲ್ಲೆಲ್ಲಾ ತಲೆ ಹಾಕಿದ. `ಭೇಲ್ - ಪುರಿ' ಪಾನಿ ಪುರಿ' ಅಂಗಡಿಗಳಿಂದಾಗಿ, `ಈರುಳ್ಳಿ'ಯ ಸ್ಥಾನ - ಮಾನ ಮುಗಿಲಿಗೇರಿತು. ಈ ಮೇಲಿನ ತಿಂಡಿ ತಿನಿಸುಗಳಲ್ಲಿ ಈರುಳ್ಳಿ ಇಲ್ಲದೇ ತಯಾರಿಸುವಂತಿರಲಿಲ್ಲ. ರಸ್ತೆಯಿಂದ ಕಾಲಾನುಕ್ರಮದಲ್ಲಿ ಅಡಿಗೆ ಮನೆಯಲ್ಲೂ ಈ ತಿಂಡಿ - ತಿನಿಸುಗಳನ್ನು ತಯಾರಿಸುವ ಕಾರ್ಯಕ್ಕೆ ಇಳಿದಳು ಗೃಹಿಣಿ, ಮಕ್ಕಳಿಗೆ ಪ್ರಿಯವಾಯಿತು ಈರುಳ್ಳಿಯ ರುಚಿ. ಈರುಳ್ಳಿಯ ಉಪಯೋಗಕ್ಕೆ ಇಂಬು ಕೊಟ್ಟಂತೆ ವೈದ್ಯರುಗಳು ಈರುಳ್ಳಿ / ಬೆಳ್ಳುಳ್ಳಿಯ ಔಷಧೀಯ ಗುಣಗಳನ್ನು ಹಾಡಿ ಹೊಗಳಲು ಪ್ರಾರಂಭಿಸಿದರು. ಆಧುನಿಕ ಜೀವನ ಶೈಲಿಯೊಡನೆ ಬೆಂಬೆತ್ತಿಕೊಂಡಿರುವ ರೋಗ - ರುಜಿನಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ರೋಗ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ `ಸಂಜೀವಿನಿ' ಎಂದು ಜನರಿಗೆ ಅರಿವಾಗಿ ಈರುಳ್ಳಿಯ ಉಪಯೋಗ ಅಧಿಕಗೊಂಡಿತು. ಮಧ್ಯಮ ವರ್ಗದ ಮನೆಯಿಂದ ಪಂಚತಾರ ಭೋಜನ ಗೃಹದವರೆಗೆ, ಹಸಿ ಈರುಳ್ಳಿ (ಅಂದವಾಗಿ ಕತ್ತರಿಸಿಟ್ಟ) ಯಿಲ್ಲದೆ, ಭೋಜನವಾಗಲಿ, ಭೋಜನಕೂಟವಾಗಲೀ ಇರುತ್ತಿರಲಿಲ್ಲ. "ಸಾಲಡ್" ತಿನ್ನುವುದು ಆರೋಗ್ಯಕ್ಕೆ ಅತ್ಯವಶ್ಯಕ ಅನ್ನೊ ಭಾವನೆ. ಎಲ್ಲರ ತಲೆಯಲ್ಲೂ ಹೊಕ್ಕಿತು. ಹಿಂದೆಯೂ ಅಷ್ಟೇ, ಇಂದೂ ಅಷ್ಟೇ, ಈರುಳ್ಳಿಯಲ್ಲಿರುವ ಪೌಷ್ಟಿಕಾಂಶಗಳು, ಔಷಧೀಯ ಗುಣಗಳು, ವ್ಯತ್ಯಾಸಹೊಂದಿಲ್ಲ. ಅದು ಜೀವಸತ್ವ `ಸಿ' ಹಾಗೂ `ನಾರಿ ನಂಶದಖನಿ' ಎಂದೇ ಹೇಳಬಹುದು. (Vitamin C, Fibre) 97 - 98 ರ ಸಾಲಿಗೆ ಈರುಳ್ಳಿಯ ಖ್ಯಾತಿ, ಮಹಿಮೆ, ವಿಶಿಷ್ಟ ಘನತೆಯಲ್ಲಿ ಕುಂದು ಏನೂ ಕಂಡು ಬರದಿದ್ದರೂ ಪ್ರಕೃತಿವಿಕೋಪದಿಂದಾಗಿ "ಉಳ್ಳಾಗಡ್ಡೆ" ಉಳ್ಳವರ ಪಾಲಿನದಾಯಿತು. ಏರಿದ ಬೆಲೆಯಿಂದಾಗಿ ಸಾಮಾನ್ಯರಿಗೆ ಗಗನಕುಸುಮವಾಯಿತು. "ಈರುಳ್ಳಿಯ" ಕಥೆಯಲ್ಲಿ "ವ್ಯಥೆ" ಕಂಡುಬಂದಿತು. ಮಾರುಕಟ್ಟೆಯಿಂದ ಮಾಯವಾಯಿತು. ನಮ್ಮ ಇತರ ಹಿತ್ತಲ ಮದ್ದಿನ ಗಿಡಗಳಂತೆ, ಈರುಳ್ಳಿಯ ಸ್ವಾಮ್ಯದ ಸನದು (Patent) ನಮ್ಮ ಕೈತಪ್ಪಿಹೋಯಿತೇ ? ಯೋಚಿಸಿ ನೋಡಿದರೆ ಎದೆನಡುಗುತ್ತದೆ. ಅರಿಶಿನ, ಬೇವು, ಬಿಲ್ವ ಮರಗಳ ಸ್ವಾಮ್ಯ ಸನದು ಪಡೆಯಲು ಹೊಂಚುಹಾಕುತ್ತಿರುವ ದೇಶಗಳ ಬಗ್ಗೆ ನಾವು ಜಾಗರೂಕರಾಗಿ ಇರಬೇಕು. ನಿಜಕ್ಕೂ ನಮ್ಮ ದೇಶದ ಏಳಿಗೆಗೆ, ಉಳಿವಿಗೆ ಇದು ಶುಭ ಸೂಚಕವಲ್ಲ. ಅಡಿಗೆ ಮಾಡುವ ವಿಧಾನಗಳ ಬಗ್ಗೆ ಅನೇಕ ಪುಸ್ತಕಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ. ಅವರೆಲ್ಲರೂ ಲೇಖನಿ ಹಿಡಿದು ಈರುಳ್ಳಿ ಇಲ್ಲದ ತಿಂಡಿ - ತಿನಿಸು ಖಾದ್ಯ ಪದಾರ್ಥಗಳನ್ನು ತಯಾರಿಸುವ ವಿಧಾನಗಳನ್ನು ಕುರಿತಾದ ಹೊಸ ಪುಸ್ತಕಗಳನ್ನು ಈ ಕೂಡಲೇ ಬರೆಯಬೇಕಾಗಿದೆ. ಬೆಳ್ಳುಳ್ಳಿ ಮಾತ್ರೆಗಳಂತೆ (Garlic Pearls) ಈರುಳ್ಳಿ ಮಾತ್ರೆಗಳು ಔಷಧಿ ಅಂಗಡಿಗಳಲ್ಲಿ ಕಾಣಲು ಕಾಲ ಹೆಚ್ಚು ಉಳಿದಿಲ್ಲ ಎಂದೇ ನನ್ನ ಅನಿಸಿಕೆ. ಅಡಿಗೆಗಳಿಗೆ ಖಾದ್ಯ ಪದಾರ್ಥಗಳಿಗೆ, ಬಾದಾಮಿ, ಎಲಕ್ಕಿ, ಸಾರ (essence) ದ ತೊಟ್ಟುಗಳು ಹಾಕುವಂತೆ ಈರುಳ್ಳಿ ಎಸೆನ್ಸ್ ಇನ್ನು 5-10 ವರ್ಷಗಳಲ್ಲಿ ಮಾರುಕಟ್ಟೆಗೆ ಧಾಳಿ ಇಡಬಹುದೇ ? ಆ ದಿನ ಬರದಿರಲೆಂದು ಆಶಿಸೋಣ. "ಎತ್ತಣ ಈರುಳ್ಳಿ - ಎತ್ತಣ ರಾಜಕೀಯ" ಎನ್ನುವಂತೆ ಈರುಳ್ಳಿಯ ಬೆಲೆ ಮುಖ್ಯವಾದ ಚಿಹ್ನೆ ಎನ್ನುವಂತೆ, ಪ್ರಚಾರಮಾಡಿ, ಓಟು ಗಿಟ್ಟಿಸಿದುದು ಈ ವರ್ಷದ ಅತ್ಯಂತ ಆಶ್ಚರ್ಯಕರವಾದ ಘಟನೆ. ಇದು ಚರಿತ್ರೆಯ ಪುಟಗಳಲ್ಲಿ ದಾಖಲಾದರೂ ಆಶ್ಚರ್ಯವೇನಿಲ್ಲ ! ಉಪ್ಪಿಟ್ಟು, ಊತಪ್ಪ ಉಳ್ಳಾಗಡ್ಡೆ ಉಪಯೋಗಿಸದೆ ಮಾಡಿದರೆ ಉಣ್ಣಲು ರುಚಿಸುವುದೇ ? ಈರುಳ್ಳಿಯ ಕಥೆ, ಈ ರೀತಿಯ ವ್ಯಥೆಯಾದುದು ನಮಗೆ ಕಣ್ಣೀರು ಬರೆಸಿದೆ. ನಿಮಗೂ ಹಾಗೇ ಅಲ್ಲವೆ ?(ಕನ್ನಡ ಸಂಕಲನ, ಜನವರಿ, 1999)

Tuesday, April 22, 2008
ಅಶ್ವತ್ಥಾಮನ ಅಧೋಲೋಕ(ಲೇಖನ)
ಇತ್ತೀಚಿಗೆ `ಪೋಕ್ರಾನ್'ನಲ್ಲಿ ನಡೆಸಲಾದ ಅಣ್ವಸ್ತ್ರ ಪರೀಕ್ಷೆಗಳ ಬಗ್ಗೆ ಪುಟಗಟ್ಟಲೆ ಪ್ರತಿಕ್ರಿಯೆಗಳು ಈಗಾಗಲೇ ಪ್ರಕಟವಾಗಿವೆ, ಇನ್ನೂ ಇಂದಿಗೂ, ಆಗುತ್ತಲೇ ಬಂದಿವೆ. ದೇದಿಪ್ಯಮಾನವಾದ ಆದಿಪರಾಶಕ್ತಿಯ ವಿಜಯ ವನ್ನು ಸೂಚಿಸುತ್ತದೆ ಎಂಬುದಾಗಿ ಬಹಳ ಮಂದಿ ಭಾವಿಸಿರುವುದು ನಿಜಕ್ಕೂ ಶೋಚನೀಯ ಸಂಗತಿ ! ಆಳವಾಗಿ ಆಲೋಚನೆ ಮಾಡಿ ನೋಡಿದ್ದೇ ಆದರೆ, `ಪೋಕ್ರಾನ್' ಮತ್ತು `ಛಾಗೈ' ನಭೋಮಂಡಲದಲ್ಲಿ, ದುಷ್ಟ `ಅಶ್ವತ್ಥಾಮ'ನ ಆಕೃತಿ ಮೂಡಿರುವುದು ಗೋಚರವಾಗುವುದರಲ್ಲಿ ಸಂದೇಹವಿಲ್ಲ.ಬರುತ್ತಿದ್ದ ಪ್ರತೀಕಾರ ಭಾವನೆ ವಿವೇಕ, ಮರುಕವನ್ನು ಮರೆಮಾಚಿತು. `ದ್ವೇಷ'ದ ಜ್ವಾಲೆಯಿಂದ ಸಮಸ್ತ `ಧರೆ'ಯನ್ನು ದಹಿಸಿಬಿಡಬೇಕೆಂದು ಹೊರಟಿದ್ದನು. ಅಶ್ವತ್ಥಾಮನ ಕ್ಷಿಪಣಿಯ ಮಾರ್ಗವು ವಕ್ರವಾದ ಕಲಿತನ ಎನ್ನಬಹುದು. ಅಸ್ತ್ರವಿದ್ಯೆಯಲ್ಲಿ ಮೇಧಾವಿಯೆನಿಸಿದ ಅವನ ತಂದೆ ದ್ರೋಣರು ಕುರುವಂಶದ ರಾಜಕುವರರಿಗೆ ಶಿಕ್ಷಕ ನೆನಿಸಿಕೊಳ್ಳುವ ಮೊದಲು ಅನುಭವಿಸಿದ ಅವಮಾನ, ನಿಂದೆ, ಅಶ್ವತ್ಥಾಮ ಎಂದೂ ಮರೆಯಲೇ ಇಲ್ಲ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅಶ್ವತ್ಥಾಮ ಹತಃ ಕುಂಜರ ಎಂದು ಹೇಳಿ ದ್ರೋಣನನ್ನು ವಧಿಸಿದ ಪಾಂಡವರನ್ನು ಕ್ಷಮಿಸಲು ಅವನಿಗಾಗಲಿಲ್ಲ. ಅವನ ಹೃದಯದಲ್ಲಿ ದ್ವೇಷದ ಕಿಡಿ ಬೂದಿಮುಚ್ಚಿ ಕುಳಿತಿತ್ತು. ಪ್ರಳಯಾಂತಕ ಯುದ್ಧ ಮುಗಿದಿದೆ, ರಾಜ ದುಯರ್ೋಧನ ಮರಣ ಶಯ್ಯೆಯಲ್ಲಿ ಇದ್ದಾನೆ. ಅಶ್ವತ್ಥಾಮನ ಪ್ರತೀಕಾರ ಕಿಡಿ ಹೊತ್ತಿಕೊಂಡಿತು. ಅಶ್ವತ್ಥಾಮ ಅಂತಕಾರಿ (ಣಜಡಿಟಟಿಚಿಣಠಡಿ) ಯಾದನು. ಹೆಣಗಳರಾಶಿಯನ್ನು ದಾಟಿಕೊಂಡು ಹೋಗಿ, ಆ ಕರಾಳ ರಾತ್ರಿಯಲ್ಲಿ ಪಾಂಡವರ ಕಗ್ಗೊಲೆಯನ್ನು ಮಾಡಿ ಮುಗಿಸುವೆನೆಂದು ನಿರ್ಧರಿಸಿ ಅವರಿಳಿದಿದ್ದ ಡೇರೆಯನ್ನು ಪ್ರವೇಶಿಸಿ ಪಾಂಡವ ಪುತ್ರರನ್ನು ಕಡಿದುಕೊಂದುಹಾಕಿದನು. ಇಷ್ಟರಿಂದ ಅವನ ದ್ವೇಷದ ಕಿಚ್ಚು ಅಡಗಲಿಲ್ಲ. ಬ್ರಹ್ಮಶೀರ್ಷ ಅಸ್ತ್ರದಿಂದ ಈ ಧರೆಯನ್ನು ನಾಶಮಾಡಿ ಅಭಿಮನ್ಯುವಿನ ವಿಧವೆ ಪತ್ನಿಯ ಗರ್ಭದಲ್ಲಿನ ಮಗುವನ್ನುಕೊಂದು ಬಿಡುವೆನೆಂದು ಹೊರಟುನಿಂತನು. ಪಾಂಡವ ವಂಶವನ್ನು ನಿನರ್ಾಮ ಮಾಡುವುದೇ ಅವನ ಉದ್ದೇಶವಾಗಿತ್ತು. ಈ ಅಂತಿಮ ಕ್ಷಣದಲ್ಲಿ ಪರಮಾತ್ಮನು ಬ್ರಹ್ಮಶೀರ್ಷ ಅಸ್ತ್ರವನ್ನು ನಿರರ್ಥಕಗೊಳಿಸಿ ಈ ಧರೆಯನ್ನು ಸರ್ವನಾಶದಿಂದ ತಪ್ಪಿಸಿ ಕಾಪಾಡಿದನು. ಅಶ್ವತ್ಥಾಮನ ಶಕ್ತಿ ಉಡುಗಿ ಹೋಯಿತು. ದುಷ್ಕರ್ಮದಿಂದಾಗಿ ಅಧೋಲೋಕಕ್ಕೆ ಶಾಶ್ವತವಾಗಿ ತಳ್ಳಲ್ಪಟ್ಟನು. ಯುಗಾಂತದಲ್ಲಿ ಇರಾವತಿ ಕವರ್ೆಯವರು ಅಶ್ವತ್ಥಾಮ ಸ್ವಧರ್ಮ - ಪರಧರ್ಮದ ನಡುವೆ ಅನಿಶ್ಚಿತ ಸ್ಥಿತಿಯಲ್ಲಿದ್ದವನೆಂದು ಅವನ ಗುಣವನ್ನು ಅಳೆದು ನೋಡಿದ್ದಾರೆ. ಬ್ರಾಹ್ಮಣನಾಗಿ ಹುಟ್ಟಿದರೂ ಕ್ಷತ್ರಿಯ ಧರ್ಮವನ್ನು ಆಚರಿಸುತ್ತಿದ್ದನು. ಯೋಧನ ಶಕ್ತಿ, ವೀರತನವಿದ್ದರೂ ಅದರೊಡನೆ ವಿವೇಕ ಸೇರ್ಪಡಿಸುವ ವಿವೇಚನೆಯಿರಲಿಲ್ಲ. ಅಣ್ವಸ್ತ್ರಗಳು ದೇಶಕ್ಕೆ ರಕ್ಷಣಾಕವಚವೆಂದೂ, ಹೆಮ್ಮೆ, ಶಕ್ತಿ, ಸಾಮಥ್ರ್ಯವನ್ನು ತೋರಿಸಲು ಅನುಕೂಲಕಾರಿಯೆಂದು ಭಾವಿಸಿರುವ ಅನೇಕರಂತೆ ಅಶ್ವತ್ಥಾಮನೂ ಸಹ ಶಸ್ತ್ರ - ವಿದ್ಯೆಯಲ್ಲಿ ನಂಬಿಕೆ ಇರಿಸಿದ್ದನು. ಆದರೆ, ಅಸ್ತ್ರವಿದ್ಯೆ ಕೇವಲ "ತಾಂತ್ರಿಕ ಸಾಮಥ್ರ್ಯ" ವನ್ನೆ ಅಲ್ಲದೆ "ನೀತಿ ತತ್ವಗಳನ್ನೂ" ಸಹ ಸೂಚಿಸುತ್ತದೆ. ಯಾವುದೇ ಘಟನೆ ಅಥವ ಪರಿಸ್ಥಿತಿಯನ್ನು ಸುಧಾರಣೆ ಮಾಡಿ, ಶಾಂತಿ, ಸ್ಥಾಪನೆ ಉದ್ದೇಶವಾಗಿರಬೇಕೇ ಹೊರತು, ಪರಿಸ್ಥಿತಿ ಹದಗೆಡುವಂತಾಗಬಾರದು. ಧರ್ಮ, ನೀತಿ, ವಿವೇಕ ಮಾರ್ಗವನ್ನು ಸತತವಾಗಿ ಅನುಸರಿಸಿ ನಡೆಯಬೇಕು. (ಣ ಣ ಚಿತಿಚಿಡಿಜಟಿಜ ಣಚಿಣ ಜಣಟಿರಣಜ ಣಜ "ಒಚಿಣಜಡಿ" ಜಿಡಿಠಟ ಣಜ "ಒಚಿಟಿಚಿಛಿ" ರಡಿಠಿಠಿಜಜ ಛಥಿ ಂತಿಚಿಣಣಚಿಟಚಿ' ಥಿಟಿಜಡಿಠಟಜ). ಭಾರತ, ಪಾಕಿಸ್ತಾನ, ಅಣ್ವಸ್ತ್ರಗಳನ್ನು ಸಿಡಿಸಿ ಅಶ್ವತ್ಥಾಮನ ಅಧೋಲೋಕಕ್ಕೆ ಕಾಲಿರಿಸಿದ್ದಾರೆ. ಅದು ಬೆಂಗಾಡು. ಅಲ್ಲಿ ಕಾಳಗ, ಕದನ, ಮತಿಭ್ರಂಶ - ಇವೇ ಯಥಾಸ್ಥಿತಿ - ವೈರಿಯ ಅಣುಗುಂಡಿಗೆ, ಅಣ್ವಸ್ತ್ರಗಳು ಉತ್ತರವಲ್ಲ ! ಯಾಕೆಂದರೆ ಅಣು ಯುದ್ಧದಲ್ಲಿ ಯಾರಿಗೂ ಜಯವಿಲ್ಲ ! "ಎರಡನೆಯ ಬಾರಿ" ಎನ್ನುವ ಹಾಗಿಲ್ಲ. ಅಣ್ವಸ್ತ್ರಗಳ ಶೇಖರಣೆ ಯಾವುದೇ ದೇಶ ಮಾಡಿದ್ದರೂ ಸಹ ಅವರು ತಮ್ಮ ಹಾಗೂ ತಮ್ಮ ವೈರಿಗಳನ್ನೇ ಅಲ್ಲದೆ, ಕೋಟ್ಯಾಂತರ ಜನಗಳ ನಿಮರ್ೂಲ ಮಾಡಬೇಕೆಂಬ ಉದ್ದೇಶ ಹೊಂದಿದ್ದಾರೆ ಎಂದೇ ಸ್ಪಷ್ಟವಾಗುತ್ತದೆ. ಕುರುಕ್ಷೇತ್ರ ಯುದ್ಧದ ಪ್ರಾರಂಭದ ಮೊದಲು ದುಯರ್ೋಧನನನ್ನು ಕುರಿತು ಕೃಷ್ಣ ಪರಮಾತ್ಮ ಹೀಗೆ ಹೇಳುತ್ತಾನೆ - ಯಾವುದೆ ಮನುಷ್ಯ ಎಲ್ಲರೂ ಸಾಯುವರೆಂದು ತಿಳಿದಿದ್ದೂ ಯುದ್ಧರಂಗಕ್ಕೆ ಇಳಿಯುವನೇ ? ಈ ಮಾತು ಇಂದು ಎಷ್ಟು ಸತ್ಯ ! ನಾವು - ನೀವು, ಈ ವಿಷಯದ ಬಗ್ಗೆ ಚಿಂತಿಸಬೇಡವೇ ?

Subscribe to:
Posts (Atom)