Wednesday, December 17, 2008

ಸತ್ಯಯುಗ ಸಮೀಪಿಸುತ್ತಿದೆಯೇ?

ಸತ್ಯಯುಗ ಸಮೀಪಿಸುತ್ತಿದೆಯೇ?
ಮುಂಬಯಿಗೆ ಮತ್ತೆ ಬಂದರೆಗಿತು ಗುಡುಗು, ಸಿಡಿಲು, ಬೆಂಕಿಯ ಮಳೆ! ವಿಧವೆಯರ, ಅನಾಥ ಮಕ್ಕಳ ಕಣ್ಣೀರಿನ ಸೆಲೆ ಬತ್ತುವ ಮೊದಲೇ ಮತ್ತೇ ಬಂದಿತು ಮುಗಿಲು ಮುಟ್ಟಿದ ರೋಧನ ಶೋಕದ ಪ್ರತಿಧ್ವನಿ! ಮುಂಬೈ ಜನತೆ (ಮುಂಬೈಕರ್ಗಳು) ಎಷ್ಟೇ ಆಘಾತ, ಅನಾಹುತ, ಅವಗಡಗಳು ಸಂಭವಿಸಿದರೂ, ಎದೆಯೊಡ್ಡಿ, ಪ್ರಾಣವನ್ನೇ ಪಣವಾಗಿಟ್ಟು, ಹೋರಾಡುವುದೇ ಅಲ್ಲದೆ, ಪರಿಸ್ಥಿತಿ ಸ್ಥಿಮಿತಗೊಂಡನಂತರ ಮತ್ತೇ ಚೇತರಿಸಿಕೊಂಡು, ತಲೆಎತ್ತಿ ನಿಲ್ಲುತ್ತಾರೆ ಎಂದು ಹೇಳುವುದೇ ಎಲ್ಲರಿಗೂ ಅಭ್ಯಾಸವಾಗಿ ಹೋಗಿದೆ. ಸಹನೆ, ಸೈರಣೆ, ಸಮಾಧಾನಕ್ಕೂ ಮಿತಿ ಎಂಬುದೇ ಇಲ್ಲವೇ? ಗಾಯಕ್ಕೆ ಉಪ್ಪು ಸವರಿದಂತೆ ನರಸತ್ತ, ನಾಚಿಕೆಗೆಟ್ಟ್ಟ ರಾಜಕಾರಣಿಗಳು, ನರಮೇಧ ನಡಿಯುತ್ತಿದ್ದರೂ ಕಂಡೂ ಕಣ್ಮುಚ್ಚಿ ಕುಳಿತಿರುವುದನ್ನು ನೋಡಿ ಜನತೆ ರೊಚ್ಚಿಗೆದ್ದಿರುವುದರಲ್ಲಿ ಆಶ್ಚರ್ಯವೇನು? ಇಂತಹ ರಾಜಕಾರಣಿಗಳು ನಮಗೆ ಬೇಕೆ? ಬೊಕ್ಕಸ ಬರಿದು ಮಾಡಿ, ಸ್ವಂತಕ್ಕಾಗಿ, ಸ್ವಾರ್ಥಕ್ಕಾಗಿ ಹಣ-ಹುದ್ದೆ ಬಳಸಿಕೊಳ್ಳುವ, ಇಂತಹ ರಾಜಕಾರಣಿಗಳು ರಾಜ್ಯ - ದೇಶವನ್ನು ಹೇಗೆ ಮುನ್ನಡೆಸುವರು? ಪುರಾಣ-ಪುಣ್ಯಕಥೆಗಳಲ್ಲಿ ಓದಿದ್ದ ರಾಕ್ಷಸರು, ರಕ್ತಬೀಜಾಸುರರು, ವಿವಿಧ ಕಡೆಗಳಿಂದ, ವಿವಿಧ ರೂಪಗಳಲ್ಲಿ ಬಂದೆರಗಿ, ಮುಗ್ಧಜೀವಿಗಳನ್ನು ಕೊಂದು, ಶಾಂತಿ ಕದಡಿ, ಹೋಗುತ್ತಿದ್ದಾರೆ. ಅವರು ಏನು ಸಾಧಿಸಬೇಕೆಂದಿದ್ದಾರೆ? ದಯೆ-ದಾಕ್ಷಿಣ್ಯ ಪಾಪಭಯ, ಮುಂತಾದ ಭಾವನೆಗಳೊಂದೂ ಇಲ್ಲದ ಬರಡಾದ ಅವರ ಮಾನಸಿಕ ಸ್ಥಿತಿ ಹೇಗಿರಬಹುದು? ಪ್ರಜಾಪ್ರಭುತ್ವ ಎಂದರೇನು? ಸ್ವೇಚ್ಛಾಚಾರವೇ? 'ಕಲಿಯುಗ' ಅಂತ್ಯಗೊಳ್ಳುತ್ತಿದೆಯೇ? 'ಸತ್ಯಯುಗ', ಸಮೀಪಿಸುತ್ತಿದೆಯೇ? ನನ್ನ ಮನಸ್ಸಿನಲ್ಲಿ ಎದ್ದೇಳುತ್ತಿರುವ ಈಮೇಲಿನ ಪ್ರಶ್ನೆಗಳಿಗೆ ಉತ್ತರಗಳಿವೆಯೇ?

ವನಜರಾಜನ್11.12.08

1 comment:

Rasikara Rajya said...

ನಮಸ್ಕಾರ ವನಜ ಅವರೆ,
ನಿಮ್ಮ ಬ್ಲಾಗ್ ನನ್ನನು ಆಲೋಚಿಸುವಂತೆ ಮಾಡಿತು. ಇದು ಒಂದು ತಾತ್ಕಾಲಿಕ ದುಷ್ಟ ಶಕ್ತಿಗಳ ಅಟ್ಟಹಾಸ ಎಂದು ನಂಬಿದ್ದೇನೆ. ಈ ಶಕ್ತಿಗಳ ದಮನವಾಗಿ ಮತ್ತೆ ಶಾಂತಿ ಕೈಗೆ ಸಿಗುವುದು ಎಂದು ಆಶಿಸುತ್ತೇನೆ.

ಮಧು