"ಪದವಿ" ಎಂಬ ಹೆಬ್ಬಾವಿನ ಹಿಡಿತದಿಂದ ಪಾರಾಗುವುದು ಹೇಗೆ ?
ಶ್ರೀ ವ್ಯಾಸ, ವಾಲ್ಮೀಕಿಗಳಂತಹ ಮಹಾ ಪ್ರಾಜ್ಞರಿಂದ ವಿರಚಿತವಾದ, `ಮಹಾಭಾರತ' ರಾಮಾಯಣದಂತಹ ಬೃಹದ್ಗ್ರಂಥದಲ್ಲಿ ಹಾಸು ಹೊಕ್ಕಾಗಿರುವ ಅನೇಕ ಕಥಾ ಪ್ರಸಂಗಗಳು ಮಾನವನ ಮನಸ್ಸಿನ ಪದರು - ಪದರುಗಳಲ್ಲಿನ ಭಾವಾನುಭವಕ್ಕೆ ಹಿಡಿದ ಕನ್ನಡಿಗಳಂತಿವೆ. `ಪದವಿ' ಸ್ಥಾನ - ಮಾನ ಮನುಷ್ಯನನ್ನು ಅಲ್ಲಾಡಿಸಿಬಿಡಬಹುದು. ಕೆಲವೊಮ್ಮೆ ಅವನಲ್ಲಿರುವ `ಸಾತ್ವಿಕ' ಭಾವನೆಗಳನ್ನು ಹೊರತರಬಹುದು, ಅಥವಾ ಅವನಲ್ಲಡಗಿಕೊಂಡಿರುವ ಬಚ್ಚಿಟ್ಟ `ನೀಚತನ' ಬಯಲಾಗುವ ಸಾಧ್ಯತೆ ಸಹ ಇದೆ ! ಯಶಸ್ಸು, ಏಳಿಗೆ `ಅಭಿವೃದ್ಧಿ' ಅಮಲೇರಿಸಬಲ್ಲದು (Heady), `ಮಹಾಭಾರತ' ದಲ್ಲಿ ಬರುವ ಕಥೆಗಳ ವಿಶಾಲತ್ವ, ವೈವಿಧ್ಯತೆ ನಮ್ಮನ್ನು ನಿಜಕ್ಕೂ ಬೆರಗುಗೊಳಿಸುವುದು. ಈ ಕಥೆಗಳ ಸಮೃದ್ಧ ಹೆಣಿಗೆಯನ್ನು (Tapestry) ಬಂದಿಸಿಟ್ಟಿರುವ ಒಂದು ನೂಲೆಳೆಯೆಂದರೆ ಕಥೆಗಳ `ಪಾತ್ರ'ಗಳಲ್ಲಿ ಕಂಡುಬರುವ ಭಾವನೆಗಳ `ಮಿತಿಮೀರಿದ' ಪ್ರದರ್ಶನ (Excess) ಇದರಿಂದಾಗಿ `ಸಾತ್ವಿಕ ಮನಸ್ಸು' ಬಗ್ಗಡವಾಗುವುದನ್ನೂ ಹಾಗೂ ದೈವೀದತ್ತವಾದ ಗುಣವುಳ್ಳವರು `ರಾಕ್ಷಸ ಪ್ರವೃತ್ತಿ'ಗೆ ಇಳಿಯುವುದನ್ನು ನೋಡುತ್ತೇವೆ. ಉನ್ನತ ಸ್ಥಾನವನ್ನಲಂಕರಿಸಿರುವವರಿಗೆ "ನಹುಷ"ನ ಕಥೆ ಪಾಠ ಕಲಿಸುತ್ತದೆ. ಓರ್ವ ಋಷಿಯಿಂದ ಶಾಪಗ್ರಸ್ತನಾದ ದೇವೇಂದ್ರ ತನ್ನ `ಪದವಿ' ಕಳೆದುಕೊಂಡು ನಾಚಿ, ತಲೆಮರೆಸಿಕೊಂಡು ಹೊರಟು ಹೋಗುತ್ತಾನೆ. ನಂತರ ದೇವತೆಗಳು, ಪಾಂಡವರ ಹಾಗೂ ಕೌರವರ ಪೂರ್ವಜನಾದ "ನಹುಷ"ನನ್ನು ಆ `ಪದವಿ'ಯನ್ನು ಸ್ವೀಕರಿಸಲು ಕೇಳಿಕೊಂಡರು. ಸದ್ಗುಣಗಳ `ಖನಿ' ಎನಿಸಿದ ನಹುಷನು, ಬಹಳ ಕಾಲದವರೆಗೆ ನ್ಯಾಯ, `ನೀತಿ', ಧರ್ಮವನ್ನಾಧರಿಸಿ, ಪ್ರಭುತ್ವವನ್ನು ನಡೆಸಿದನು. ಕಾಲ ಸರಿಯಿತು. `ಪದವಿ', `ಅಧಿಕಾರ', ದ ವಿಷ, ನಿಧಾನವಾಗಿ ಅವನ ನರ - ನಾಡಿಗಳಲ್ಲಿ ಹರಿಯಲಾರಂಭಿಸಿತು. ಅದರ ಪ್ರಭಾವದಿಂದಾಗಿ ಅವನು ದುರಹಂಕಾರಿ, ಕ್ರೂರಿಯಾಗಿ ಬದಲಾಯಿಸಿದನು. ದೇವಗಣ ಪಶ್ಚಾತ್ತಾಪ ಗೊಂಡಿತು. ಅವನ ಹೀನವರ್ತನೆ ಪರಮಾವಧಿತಲಪಿತು. ಅವನ ಹೀನ ದೃಷ್ಟಿ ದೇವೇಂದ್ರನ ಪತ್ನಿ ಶಚೀದೇವಿಯ ಮೇಲೆ ಬಿದ್ದಿತ್ತಲ್ಲದೆ, ಋಷಿ ಅಗಸ್ತ್ಯರನ್ನು ಅವಮಾನ ಅವಹೇಳನ ಮಾಡಲೂ ಸಹ ಅವನು ಹೇಸಲಿಲ್ಲ. ಅಂದಿನಿಂದ ಅವನ ಅವನತಿ ಪ್ರಾರಂಭವಾಯಿತು. ಅವರ ಶಾಪದಿಂದ `ನಹುಷ'ನು ಹೆಬ್ಬಾವಾಗಿ ಸ್ವರ್ಗದಿಂದ ದಟ್ಟ ಅರಣ್ಯದಲ್ಲಿ ಬಂದು ಬೀಳುತ್ತಾನೆ. "ಪದವಿ", ಹೇಗೆ ಹೆಬ್ಬಾವಾಗಿ ತನ್ನ ಹಿಡಿತದಲ್ಲಿ ಸಿಕ್ಕಿ ಬಿದ್ದವನನ್ನು ನಾಶಮಾಡಬಲ್ಲದು ಎಂಬುದಕ್ಕೆ ನಹುಷನ ಕಥೆ ದೃಷ್ಟಾಂತವೆನಿಸುತ್ತದೆ. ಇದು ದ್ವಾಪರಯುಗದ ಘಟನೆಯಾಗಿರಬಹುದು. ಆದರೆ ಇಂದೂ, ಈಗಲೂ, ಈ `ಮೌಲ್ಯ'ಗಳು ಪ್ರಸ್ತುತವೆನಿಸಿವೆ. ಉನ್ನತ ಸ್ಥಾನವನ್ನಲಂಕರಿಸುವವರಿಗೆ ಈ ಕಥೆ ಪಾಠ ಕಲಿಸುತ್ತದೆ. ಮಾರ್ಗದರ್ಶನ ನೀಡುತ್ತದೆ. `ವ್ಯಕ್ತಿ'ಗಳಾಗಲೀ ಸಂಘ - ಸಂಸ್ಥೆಗಳಾಗಲೀ ಇಂತಹ ಸಂದರ್ಭದಲ್ಲಿ ಹೇಗೆ ವತರ್ಿಸಬೇಕು ? `ಸಂಯಮ' ಸಾಧನೆ ಯಾವ ರೀತಿ ಮಾಡಬೇಕು ಎಂಬುದರ ಮೇಲೆ ಬೆಳಕು ಚೆಲ್ಲಿದೆ, `ಭಗವದ್ಗೀತೆ' ಕುರುಕ್ಷೇತ್ರದ ರಣಭೂಮಿಯಲ್ಲಿ ! ಇದೇ `ಅನುಶಾಸನ' ಯಾವುದೇ ಕೋಟಿ - ಕೊತ್ತಳ ರಾಜನನ್ನು ಕಾಪಾಡಲು ಸಾಧ್ಯವಿಲ್ಲ. `ಪದವಿ'ಯೊಡನೆ ಕೂಡಿ ಬರುವ `ಪ್ರಲೋಭನ'ಗಳಿಂದ ಆಕರ್ಷಣೆಗಳಿಂದ ಪಾರಾಗಲು, ಒಂದೇ ಮಾರ್ಗ ಎಂದರೆ `ಅನುಶಾಸನ' - ಅಂದರೆ `ಸ್ವ - ಪರೀಕ್ಷೆ'. ತನ್ನನ್ನು ತಾನೇ ಪರೀಕ್ಷೆಗೆ ಒಳಪಡಿಸಿಕೊಂಡು ತಿದ್ದಿಕೊಂಡರೆ ಮಾತ್ರ `ರಾಜ' ರಾಜ್ಯವನ್ನು ಆಳಬಲ್ಲನು, ಪತನದಿಂದ ಪಾರಾಗಬಲ್ಲನು. ಮರ್ಯಾದ ಪುರುಷ ಶ್ರೀರಾಮ `ಭರತ'ರಂತಹ ರಾಜರು, ನಮಗೆ ಮಾರ್ಗದರ್ಶನ ನೀಡಿದ್ದಾರೆ. ಮಾದರಿ ರಾಜರನ್ನು ನಾವು ಚುನಾಯಿಸುವುದು, `ಸೂಜಿಯನ್ನು ಹುಲ್ಲು ಮೆದೆಯಲ್ಲಿ ಹುಡುಕಿದಂತೆಯೆ' ಕಷ್ಟ ಸಾಧ್ಯವಾದ ಕೆಲಸವಾಗಿದೆ. ನಾವು ಇಂದು ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೇವೆ. ಪ್ರಜಾಪ್ರಭುತ್ವವಾದ ನಮ್ಮ ನಾಡು ಭರತ ದೇಶ, ಮತ್ತೊಮ್ಮೆ ಪ್ರಜಾಹಿತ ಚಿಂತಕರ ಮುಂದಾಳುತ್ವದಲ್ಲಿ ಕಾಯಕಲ್ಪ ಪಡೆದು ಜಗತ್ತಿನಲ್ಲಿಯೇ `ಶ್ರೇಷ್ಠ' ದೇಶವೆಂದು ಖ್ಯಾತಿ ಪಡೆಯಬೇಕೆಂಬುದೇ ನಮ್ಮ, ನಿಮ್ಮೆಲ್ಲರ ಆಶಯ ! `ಪ್ರಜೆ'ಗಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲಸಲಿ, ಈ ವರ್ಷದ `ಯುಗಾದಿ' ನಿಜವಾಗಿ `ನವಯುಗ'ದ ನಾಂದಿಯಾಗಲಿ ಎಂದು ನಾವೆಲ್ಲರೂ ಪರಮಾತ್ಮನನ್ನು ಪ್ರಾಥರ್ಿಸೋಣ ! `ಜೈ ಭಾರತ ಮಾತೆ, ಜೈ ಕನ್ನಡ ದೇವಿ' - ನಿನಗೆ ಕೋಟಿ ಕೋಟಿ ನಮನಗಳು.(ಕನ್ನಡ ನುಡಿಮುತ್ತು - ಏಪ್ರಿಲ್ 1998)
Saturday, May 17, 2008
Subscribe to:
Post Comments (Atom)

1 comment:
Hi, I came through your site , I really don't wanna sound like spam but hey, would you like to link my site maxamator.com, we are emerging SEO Specialists / PHP developer from India, I’ll show my link love to you from my Pr5 sites :)
Let me know if you are interested.
Deekay
Email: - dk@maxamator.com
Post a Comment